Advertisement

Deaf Lawyer: ಇತಿಹಾಸದಲ್ಲೇ ಮೊದಲು… ಸುಪ್ರೀಂಕೋರ್ಟ್ ನಲ್ಲಿ ಮೂಕ ವಕೀಲೆ ವಾದ ಮಂಡನೆ

02:57 PM Sep 26, 2023 | Team Udayavani |

ನವದೆಹಲಿ: ಮೊಟ್ಟಮೊದಲ ಬಾರಿಗೆ, ಕಿವುಡ ಮತ್ತು ಮೂಗ ವಕೀಲರೊಬ್ಬರು ಸಂಕೇತ ಭಾಷೆಯ (ಇಂಟರ್ಪ್ರಿಟರ್) ಸಹಾಯದಿಂದ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದಾರೆ.

Advertisement

ವಕೀಲರ ಹೆಸರು ಅಡ್ವೊಕೇಟ್ ಸಾರಾ ಸನ್ನಿ. ಸಾರಾಗೆ ಸುಪ್ರೀಂ ಕೋರ್ಟ್ ಕಲಾಪದಲ್ಲಿ ಕಾಣಿಸಿಕೊಳ್ಳುವುದು ಕನಸಿನ ಮಾತಿಗಿಂತ ಕಡಿಮೆಯಿಲ್ಲ. ಅವರು ಅಭ್ಯಾಸ ಮಾಡುವ ಮೂಕ ವಕೀಲರಾಗಿ ನೋಂದಾಯಿಸಲ್ಪಟ್ಟ ಭಾರತದ ಮೊದಲ ವಕೀಲರಾಗಿದ್ದಾರೆ.

ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ ಚಂದ್ರಚೂಡ್‌ ಅವರಿದ್ದ ಪೀಠವು ವರ್ಚುವಲ್‌ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿಯು ತಮ್ಮ ವ್ಯಾಖ್ಯಾನಕಾರ ಸೌರಭ್‌ ರಾಯ್‌ ಚೌಧರಿ ಮೂಲಕ ವಾದ ಮಂಡಿಸಿದ್ದಾರೆ. ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್‌ ಅವರು ಬಾಯಿ ಮಾತಿನಲ್ಲಿ ಮೂಲಕ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಈ ಪ್ರಯತ್ನವನ್ನು ಅನೇಕ ಗಣ್ಯರು ಮತ್ತು ಹಿರಿಯ ವಕೀಲರು ಶ್ಲಾಘಿಸಿದ್ದಾರೆ. ವಿಚಾರಣೆಯೊಂದರ ಆರಂಭದ ವೇಳೆ ವರ್ಚುವಲ್‌ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಕ್ರೀನ್‌ ಮೇಲೆ ಬರಲು ಅನುಮತಿ ನೀಡದೇ ವ್ಯಾಖ್ಯಾನಕಾರ ಸೌರಭ್‌ಗೆ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಕ್ರೀನ್‌ನಲ್ಲಿ ಸೌರಭ್‌ ಮಾತ್ರ ಕಾಣಿಸಿಕೊಂಡು ಸಾರಾ ತೆರೆಯ ಹಿಂದೆ ಮಾಡುತ್ತಿದ್ದ ಸಂಜ್ಞೆಗಳಿಗೆ ವಿವರ ನೀಡತೊಡಗಿದರು. ಆಗ ಮಧ್ಯಪ್ರವೇಶಿಸಿದ ನ್ಯಾ। ಚಂದ್ರಚೂಡ್‌, ವಕೀಲೆ ಸಾರಾ ಅವರಿಗೂ ಸ್ಕ್ರೀನ್‌ ಮೇಲೆ ಅವಕಾಶ ನೀಡಿ ಎಂದು ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಕ್ರೀನ್‌ನಲ್ಲಿ ಸಂಜ್ಞೆಗಳ ಮೂಲಕ ವಾದ ಮಂಡಿಸಿದರೆ ಅವರ ವ್ಯಾಖ್ಯಾನಕಾರ ಸೌರಭ್‌ ಅವರು ಸಾರಾ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ವಿವರಿಸಿದರು.

ಈ ಕುರಿತು ಹೇಳಿಕೆ ನೀಡಿದ ಸಂಚಿತಾ ಆನ್ ಸಾರಾ ಪ್ರತಿಭಾವಂತ ಹುಡುಗಿ ಮತ್ತು ತನ್ನ ಕನಸುಗಳನ್ನು ಈಡೇರಿಸಲು ಬಯಸುತ್ತಾಳೆ ಎಂದು ಹೇಳಿದ್ದಾರೆ. ಆಕೆಯ ಕೆಲಸವನ್ನು ನಾನು ಬೆಂಬಲಿಸುತ್ತೇನೆ ಅದರೊಂದಿಗೆ ಭಾರತದಲ್ಲಿ ಕಿವುಡರಿಗೆ ಈ ರೀತಿಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Corruption Case: ಮಾಜಿ ಸಚಿವ ಮನ್‌ಪ್ರೀತ್ ಬಾದಲ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next