ನವದೆಹಲಿ: ಯೂಟ್ಯೂಬ್ ಮಾಧ್ಯಮ ಸಾವಿರಾರು ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ಹಣಗಳಿಸುವ ಒಂದು ವೇದಿಕೆಯಾಗಿದೆ. ಆದರೆ ಅಷ್ಟು ಸುಲಭವಾಗಿ ವಿಡಿಯೋಗಳಿಂದ ಆದಾಯ ಬರುವುದಿಲ್ಲ. ಯೂಟ್ಯೂಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ವ್ಲಾಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಟ್ರಕ್ ಓಡಿಸಿಕೊಂಡೇ ದಿನನಿತ್ಯದ ವ್ಲಾಗ್ ಮಾಡಿ ತನ್ನದೇ ಚಾನೆಲ್ ನಲ್ಲಿ 1 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬರ್ಸ್ ಹೊಂದಿದ್ದಾರೆ ರಾಜೇಶ್. ಯೂಟ್ಯೂಬ್ ನಲ್ಲಿ ತನ್ನ ವ್ಲಾಗ್ ನಿಂದಲೇ ಭರ್ಜರಿ ಆದಾಯ ಹಾಗೂ ಅಪಾರ ಚಂದಾದಾರರನ್ನು ಹೊಂದಿರುವ ರಾಜೇಶ್ ಟ್ರಕ್ ಡ್ರೈವರ್ ಗಿಂತ ವ್ಲಾಗರ್ ಆಗಿಯೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಕೆಲಸದ ನಿಮಿತ್ತ ಟ್ರಕ್ ಚಲಾಯಿಸುತ್ತಾ ಒಂದು ಊರಿನಿಂದ ಮತ್ತೊಂದು ಹೋಗುವ ರಾಜೇಶ್, ದಾರಿಯಲ್ಲಿ ಹೋಗುವ ವೇಳೆ ಆ ಊರಿನ ಪ್ರಕೃತಿಯ ಸೊಬಗು ಹಾಗೂ ಆಹಾರ ರುಚಿಯ ಬಗ್ಗೆ ವ್ಲಾಗ್ ಮಾಡುತ್ತಾರೆ. ಇದಲ್ಲದೆ ಟ್ರಕ್ ನಲ್ಲಿ ದಿನಚರಿ ಹೇಗಿರುತ್ತದೆ. ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಹೇಗೆ ಮಾಡುತ್ತಾರೆ. ಯಾವ ರೀತಿ ಹೈದರಾಬಾದ್ ಬಿರಿಯಾನಿ ಮಾಡುತ್ತಾರೆ ಎನ್ನುವುದರ ಬಗ್ಗೆ ರಾಜೇಶ್ ತನ್ನ ಯೂಟ್ಯೂಬ್ ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಆಹಾರವನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಅವರ ವಿಡಿಯೋಗಳು ಹಾಗೂ ಫುಡ್ ವ್ಲಾಗ್ ಗಳ ವಿಡಿಯೋಗಳು ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.
ʼಡೈಲಿ ವ್ಲಾಗ್ಸ್ ಆಫ್ ಇಂಡಿಯನ್ ಟ್ರಕ್ ಡ್ರೈವರ್ʼ(“Daily vlogs of Indian truck driver”) ಎನ್ನುವ ಇವರ ಯೂಟ್ಯೂಬ್ ಚಾನೆಲ್ ನಲ್ಲಿ 1.21 ಮಿಲಿಯನ್ ಗೂ ಅಧಿಕ ಸಬ್ ಸ್ಕ್ರೈಬರ್ಸ್ ಇದ್ದಾರೆ. 4.12 ಲಕ್ಷ ಇನ್ಸ್ಟಾಗ್ರಾಮ್ ಫಾಲೋವರ್ಸ್ ಇದ್ದಾರೆ.
ರಾಜೇಶ್ ಅವರ ಯೂಟ್ಯೂಬ್ ಚಾನೆಲ್ ಗೆ ಲಕ್ಷಾಂತರ ನೋಡುಗರಿದ್ದಾರೆ.