ಉಳ್ಳಾಲ: ಉಳ್ಳಾಲ, ಸೋಮೇಶ್ವರ ಉಚ್ಚಿಲ ವ್ಯಾಪ್ತಿಯಲ್ಲಿ ಚಂಡಮಾರುತ ಹಿನ್ನೆಲೆಯಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ತುರ್ತು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜೂ. 14ರಂದು ತುರ್ತು ಸಭೆ ಕರೆದಿದ್ದು, ಈ ಸಭೆಯಲ್ಲಿ ಕಡಲ್ಕೊರೆತದಿಂದ ತೊಂದರೆ ಗೀಡಾ ದವರೂ ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸೋಮೇಶ್ವರ ಉಚ್ಚಿಲದಲ್ಲಿ ಕೇಂದ್ರ ಸರಕಾರ ಮತ್ತು ಎಡಿಬಿ ಯೋಜನೆಯಡಿ ಶಾಶ್ವತ ಕಾಮಗಾರಿ ಆರಂಭಗೊಂಡಿದೆ. ಸಮುದ್ರ ತೀರದಲ್ಲಿ ಒಟ್ಟು 10 ಬಮ್ಸ್ ರಚನೆ ಕಾರ್ಯ ಆರಂಭಗೊಂಡಿದ್ದು ಎರಡು ಬಮ್ಸ್ì ಪೂರ್ಣಗೊಂಡಿದೆ.
ಪೂರ್ಣಗೊಂಡ ಪ್ರದೇಶದಲ್ಲಿ ಕೊರೆತದ ಸಮಸ್ಯೆ ಕಡಿಮೆಯಾಗಿದ್ದು, ಉಳಿದ ಪ್ರದೇಶದಲ್ಲಿ ಬಮ್ಸ್ì ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿಗೆ ವೇಗವನ್ನು ನೀಡುವ ಉದ್ದೇಶ ಮತ್ತು ಈಗ ಉಂಟಾಗಿರುವ ಕಡಲ್ಕೊರೆತ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಎಡಿಬಿ ಅಧಿಕಾರಿಗಳು ಕಂದಾಯ ಅಧಿಕಾರಗಳು ಮತ್ತು ಬಂದರು ಇಲಾಖೆಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದು, ಸಚಿವ ಯು.ಟಿ.ಖಾದರ್ ಜಿಲ್ಲೆಗೆ ಆಗಮಿಸಿದ ಬಳಿಕ ಜಂಟಿಯಾಗಿ ಸಭೆ ಕರೆದು ಅಭಿವೃದ್ಧಿ ಮತ್ತು ಸಮಸ್ಯೆ ಪರಿಹಾರಕ್ಕೆ ಚಿಂತನೆ ನಡೆಸಲಾಗುವುದು ಎಂದರು.
ಗಂಜಿ ಕೇಂದ್ರ ಸ್ಥಾಪನೆಗೆ ಆದ್ಯತೆ
ಕಡಲ್ಕೊರೆತ ಪ್ರದೇಶದಲ್ಲಿ ಜನರ ಪ್ರಾಣ ಹಾನಿಯಾಗದಂತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಅಪಾಯದಲ್ಲಿರುವ ಪ್ರದೇಶದಲ್ಲಿ ಜನರಿಗೆ ಆವಶ್ಯಕತೆಯಿದ್ದರೆ ಗಂಜಿ ಕೇಂದ್ರ ಸ್ಥಾಪನೆಗೆ ಸ್ಥಳಿಯಾಡಳಿತ ಸಂಸ್ಥೆ ಮತ್ತು ಜಿಲ್ಲಾಧಿಕಾರಿಗಳ ಮಾರ್ಗದರ್ಶನ ನೀಡಿದ್ದು, ಅಪಾಯ ಸ್ಥಿತಿಯಲ್ಲಿರುವ ಜನರ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ರಾಜ್ಯ ಜಿಲ್ಲಾ ಉಪಾ ಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ರಾಜ್ಯ ಕಾರ್ಯ ಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿ ದೊಟ್ಟು, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹಾಗೂ ನಮಿತಾ ಶ್ಯಾಂ, ಮಾಜಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ ಉಚ್ಚಿಲ್, ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಅಶ್ರಫ್ ಹರೇ ಕಳ, ಪ್ರ. ಕಾರ್ಯದರ್ಶಿಗಳಾದ ಮನೋಜ್ ಆಚಾರ್ಯ, ಮೋಹನ್ ರಾಜ್ ಕೆ.ಆರ್., ಲಲಿತಾ ಸುಂದರ್, ರಾಜೀವಿ ಕೆಂಪುಮಣ್ಣು, ಜೀವನ್ ಕುಮಾರ್ ತೊಕ್ಕೊಟ್ಟು, ಯಶವಂತ ಅಮಿನ್, ಅನಿಲ್ ದಾಸ್, ಪುರುಷೋತ್ತಮ ಕಲ್ಲಾಪು, ಚಂದ್ರ ಹಾಸ್ ಪಂಡಿತ್ ಹೌಸ್, ಹರಿಯಪ್ಪ ಸಾಲ್ಯಾನ್, ಪ್ರಕಾಶ್ ಸಿಂಪೋನಿ, ಸುರೇಂದ್ರ ಶೆಟ್ಟಿ ಮಂಚಿಲ, ಹರೀಶ್ ಅಂಬ್ಲಿಮೊಗರು, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್, ತಾ. ಪಂ. ಸದಸ್ಯ ರವಿಶಂಕರ್ ಸೋಮೇ ಶ್ವರ, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಆನಂದ ಶೆಟ್ಟಿ ಭಟ್ನಗರ, ದಯಾನಂದ್ ತೊಕ್ಕೊಟ್ಟು ಉಪಸ್ಥಿತರಿದ್ದರು.