Advertisement
ಬಿಜೈ ಆನೆಗುಂಡಿ ಎಂಬಲ್ಲಿ ಮರ ಬಿದ್ದು ಬಹುತೇಕವಾಗಿ ಹಾನಿಗೊಳಗಾಗಿರುವ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ತುರ್ತು ಪರಿಹಾರವಾಗಿ ತಲಾ 1ಲಕ್ಷ 19 ಸಾವಿರ ರೂ.ಗಳನ್ನು ಆ ಮನೆಗಳ ಮಾಲಕರಾದ ಭವಾನಿ ಹಾಗೂ ಅನುರಾಧಾ ಎಂಬವರಿಗೆ ಹಸ್ತಾಂತರಿಸಿದರು.
ಪ್ರಾಕೃತಿಕ ವಿಕೋಪದ ಪರಿಹಾರವಾಗಿ ಪ್ರತಿಯೊಂದು ಜಿಲ್ಲಾಧಿಕಾರಿ ಕನಿಷ್ಠ 5 ಕೋಟಿ ರೂ. ಮೀಸಲಿಡುವಂತೆ ಹಾಗೂ ತುರ್ತು ಪರಿಹಾರ ಕ್ರಮಗಳು ಯುದ್ಧೋ ಪಾದಿಯಲ್ಲಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಪ್ರಾಕೃತಿಕ ವಿಕೋಪದಿಂದಾಗಿ ಮನೆಗಳಿಗೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾಗಿದ್ದಲ್ಲಿ ಪರಿಹಾರವಾಗಿ ಸಿಗುವ ಮೊತ್ತ ಕಡಿಮೆ. ಅದನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಅವರಿಗೆ ಸಿಕ್ಕಿಲ್ಲ. ಅವರಿಗೂ ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯ ಎಂಬುದನ್ನು ನಿರ್ಣಯಿಸಲಾಗುವುದು ಎಂದು ಹೇಳಿದರು.
Related Articles
Advertisement
ಕಡಲ್ಕೊರೆತ ತಡೆ ಕಾಮಗಾರಿ ವೀಕ್ಷಣೆ ಬಳಿಕ ಸಚಿವರು ಸೋಮೇಶ್ವರ- ಉಚ್ಚಿಲ ಹಾಗೂ ಉಳ್ಳಾಲದ ಸಮುದ್ರ ತೀರದಲ್ಲಿ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕಾಗಿ ನಡೆಸಲಾದ ತಡೆಗೋಡೆ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದರು.