Advertisement
ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಅವರ ತಂಡ ಹಾಗೂ ಸಿಪಿಐ ಆನಂದರಾವ ಜಿಇ ಕಾರ್ಖಾನೆಯ ಮುಖ್ಯದ್ವಾರಕ್ಕೆ ಬೀಗ ಹಾಕಿರುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ಆನಂದರಾವ ಕಾರ್ಖಾನೆ ಕಾವಲುಗಾರರಾಗಿ ನೇಮಕವಾದ ಸುಮಾರು 11 ಸುರಕ್ಷತಾ ಸಿಬ್ಬಂದಿ ಕಾರ್ಖಾನೆ ಒಳಗಡೆ ಇದ್ದಾರೆ. ಅವರಿಗೆ ಕುಡಿಯಲು ನೀರಿಲ್ಲ ಹಾಗೂ ತಿನ್ನಲು ಆಹಾರವಿಲ್ಲ. ಸುಮಾರು ನಾಲ್ಕು ದಿನಗಳಿಂದ ಕಂಪನಿಯ ಒಳಗಡೆ ಪರದಾಡುತ್ತಿದ್ದಾರೆ. ಅಲ್ಲದೇ ಕಾರ್ಮಿಕರು ಯಾವುದೇ ಆಹಾರ ನೀಡಲು ಕೊಡುತ್ತಿಲ್ಲ. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು ಎಂದು ಸಿಪಿಐ ಆನಂದರಾವ ಕಾರ್ಮಿಕ ಅಧಿಕಾರಿ ಗಮನಕ್ಕೆ ತಂದರು. ಆಗ ಜಿಲ್ಲಾ ಕಾರ್ಮಿಕ ಅಧಿಕಾರಿ ಸುರಕ್ಷತಾ ಸೂಪರ್ ವೈಸರ್ ವೀರಣ್ಣ ಅವರಿಗೆ ಆಹಾರ ಸೇವನೆ ಇಲ್ಲದೇ ಹೆಚ್ಚು ಕಮ್ಮಿ ಏನಾದರೂ ಆದರೆ ಯಾರು ಜವಾಬ್ದಾರರು. ಮೊದಲು ಗೇಟಿನ ಕೀಲಿ ತೆಗೆದು ಊಟ ಮಾಡಿ ಬನ್ನಿ. ಪಾಳಿಗೊಬ್ಬರಂತೆ ಕೆಲಸ ಮಾಡಿ ಎಂದರು. ಆದರೆ ಸುರಕ್ಷತಾ ಸೂಪರ್ ವೈಸರ್ ವೀರಣ್ಣ ನಮ್ಮ ಹತ್ತಿರ ಕೀಲಿ ಕೈ ಇಲ್ಲ ಎಂದರು. ಅಲ್ಲದೇ ಸುರಕ್ಷತಾ ಮೇಲಾಧಿಕಾರಿಗಳಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದರೂ ಯಾವುದಕ್ಕೂ ಸ್ಪಂದಿಸಲಿಲ್ಲ. ಸಿಪಿಐ ಆನಂದರಾವ್ ಕೀಲಿ ತೆಗೆಯುವಂತೆ ತಿಳಿಸಿದರೂ ತೆಗೆಯಲಿಲ್ಲ. ಇವರು ಕಾರ್ಮಿಕ ಅಧಿಕಾರಿಗಳ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ ಎಂದರೆ ನಮಗೆ ಹೇಗೆ ಕೊಡುತ್ತಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ನಾವು ಕೆಲಸಗಾರರು ಸರ್.ಜಿಇ ಕಂಪನಿಯವರು ಹೇಳಿದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ಬಿಟ್ಟರೆ ಮತ್ತೇನು ಹೇಳಲು ಸುರಕ್ಷತಾ ಸಿಬ್ಬಂದಿ ಹಿಂಜರಿಯುತ್ತಿರುವದು ಕಂಡು ಬಂತು.
ಸತ್ಯನಾರಾಯಣ ಜೋಷಿ, ಜಿಇ ಕಾರ್ಮಿಕ ಮುಖಂಡ
Related Articles
ಶ್ರೀಹರಿ ದೇಶಪಾಂಡೆ,ಜಿಲ್ಲಾ ಕಾರ್ಮಿಕ ಅಧಿಕಾರಿ
Advertisement