Advertisement

ಮೊರಾಕ್ಕೊ ತಂಡದ ಪರ ಆಡುತ್ತಿರುವ ಅಶ್ರಫ್ ಹಕೀಮಿ ಅವರ ಪತ್ನಿ ಅತಿ ಸುಂದರ ನಟಿ

11:11 PM Dec 13, 2022 | Team Udayavani |

ಮೊರಾಕ್ಕೊ ತಂಡವನ್ನು ವಿಶ್ವಕಪ್‌ನಲ್ಲಿ ಪ್ರತಿನಿಧಿಸುತ್ತಿರುವ ಅಶ್ರಫ್ ಹಕೀಮಿ ಹುಟ್ಟಿದ್ದೆಲ್ಲ ಸ್ಪೇನ್‌ನಲ್ಲಿ. ಜಗತ್ತಿನ ಶ್ರೇಷ್ಠ ಮುನ್ಪಡೆ ಆಟಗಾರರಲ್ಲಿ ಒಬ್ಬರು. ಇವರು ತಮ್ಮ ಪೂರ್ವಿಕರ ದೇಶವಾದ ಮೊರಾಕ್ಕೊ ತಂಡದ ಪರ ಆಡುತ್ತಿದ್ದಾರೆ. ಈಗ ವಿಶ್ವಕಪ್‌ ನಡೆಯುತ್ತಿರುವುದರಿಂದ ಅಭಿಮಾನಿಗಳಿಗೆ ಇವರು ಯಾರು ಎನ್ನುವುದು ಖಚಿತವಾಗಿದೆ.

Advertisement

ಆದರೆ ಇವರ ಪತ್ನಿ ಯಾರು? ಅವರ ಹೆಗ್ಗಳಿಕೆ ಏನೆಂದು ಗೊತ್ತಾ? ಹೆಸರು ಹಿಬಾ ಅಬೌಕ್‌. ಟ್ಯುನೀಶಿಯದಲ್ಲಿ ನಟಿಯಾಗಿ ಖ್ಯಾತರಾಗಿದ್ದಾರೆ. ಹುಟ್ಟಿದ್ದೆಲ್ಲ ಲಿಬಿಯದಲ್ಲಿ. ಅತಿ ಸುಂದರ ನಟಿ ಎಂಬ ಹೆಗ್ಗಳಿಕೆ ಹೊಂದಿರುವ ಈಕೆಯೀಗ ಅಶ್ರಫ್ ಕಾರಣಕ್ಕೆ ಮತ್ತಷ್ಟು ಸುದ್ದಿಯಲ್ಲಿದ್ದಾರೆ.

ಅವರ ಬಗ್ಗೆ ಬೇಕಾದಷ್ಟು ಹುಡುಕಾಟ ನಡೆಯುತ್ತಿದೆ. ವಿಶೇಷವೆಂದರೆ ಅಶ್ರಫ್ ಹಕೀಮಿಗೆ ಇನ್ನೂ ಕೇವಲ 24 ವರ್ಷ. ಪತ್ನಿ ಅಬೌಕ್‌ಗೆ 36 ವರ್ಷ! ಇವರಿಬ್ಬರು ಮೊದಲ ಬಾರಿ 2018ರಲ್ಲಿ ಭೇಟಿಯಾದರು. 2020ರಲ್ಲಿ ವಿವಾಹವಾದರು.

 

Advertisement

Udayavani is now on Telegram. Click here to join our channel and stay updated with the latest news.

Next