Advertisement

ಅಂಚೆ ಮೂಲಕ ಮತಹಾಕಿದ ದೇಶದ ಮೊದಲ ಮತದಾರ ನೇಗಿ

09:01 PM Nov 03, 2022 | Team Udayavani |

ಶಿಮ್ಲಾ: ಶ್ಯಾಮಶರಣ್ ನೇಗಿ ಹೆಸರಿನ ಈ ವ್ಯಕ್ತಿಗೆ 106 ವರ್ಷ. ಇವರು ಬುಧವಾರ ಹಿಮಾಚಲಪ್ರದೇಶದ ಕಿನ್ನೌರ್‌ ಜಿಲ್ಲೆಯ ಕಲ್ಪ ಎಂಬ ಊರಿನಲ್ಲಿರುವ ತಮ್ಮ ನಿವಾಸದಲ್ಲಿ ಅಂಚೆಯ ಮೂಲಕ, ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದರು!

Advertisement

1951ರ ದೇಶದ ಮೊದಲ ಚುನಾವಣೆಗೆ ಮತ ಚಲಾಯಿಸಿದ ಇವರ ಹೆಗ್ಗಳಿಕೆ ಏನು ಗೊತ್ತಾ? ಇವರು ಭಾರತದ ಮೊದಲ ಮತದಾರ. ಇದುವರೆಗೆ ಒಟ್ಟು 34 ಬಾರಿ ಮತ ಹಾಕಿದ್ದಾರೆ. ಈ ಬಾರಿಯೂ ಮತಗಟ್ಟೆಗೇ ಹೋಗಿ ಮತ ಹಾಕಬೇಕೆಂದು ಬಯಸಿದ್ದರು. ಆದರೆ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಅಂಚೆ ಮೂಲಕ ಮತಹಾಕಲು ನಿರ್ಧರಿಸಿದರು.

ಇದನ್ನು ನೋಡಿದ ಜಿಲ್ಲಾ ಚುನಾವಣಾ ಆಯೋಗ ಇವರ ಮನೆಗೆ ಅಂಚೆ ಮತಗಟ್ಟೆಯನ್ನು ತಂದು, ಮತ ಹಾಕಿಸಿಕೊಂಡಿತು. 2020ರಿಂದ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಅಂಚೆಯ ಮೂಲಕವೇ ಮತ ಹಾಕಲು ಅವಕಾಶ ಕೊಟ್ಟಿದೆ. ನ.12ರಂದು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next