ಮುಂಬಯಿ: ಮೀರಾರೋಡ್ ಪೂರ್ವದ ಮೀರಾಗಾಂವ್‌ನ ಮೀರಾ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ಆವರಣದಲ್ಲಿ ಸ್ಥಾಪನೆಗೊಂಡಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 26ನೇ ವರ್ಧಂತ್ಯುತ್ಸವವು ಜೂ. 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವೇದಮೂರ್ತಿ ಕಾಪು ಕಲ್ಯ ರಜನೀಶ ತಂತ್ರಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಸಂಜೆ ಮಹಾರಂಗ ಪೂಜೆ ನೆರವೇರಿತು. ಬಲಿಮೂರ್ತಿ ಉತ್ಸವವು ಪಳ್ಳಿ ಗುರುಪ್ರಸಾದ್ ಭಟ್ ಅವರಿಂದ ನೆರವೇರಿತು.
ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ. ಟ್ರಸ್ಟಿ ಸಾಣೂರು ಸಾಂತಿಂಜ ಜನಾರ್ದನ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಪುರೋಹಿತ ವೃಂದದ ಸಾಣೂರು ಮಾಧವ ಭಟ್, ಶ್ರೀಶ ಉಡುಪ, ಗೌರಿಶಂಕರ ಭಟ್, ಅನಂತ್ ಭಟ್, ರಾಘವೇಂದ್ರ ಉಪಾಧ್ಯಾಯ, ದೇವರಾಜ ನೆಲ್ಲಿತ್ತಾಯ, ನಾಗರಾಜ ಮುಂಚಿತ್ತಾಯ, ರಾಘವೇಂದ್ರ ಮುಂಚಿತ್ತಾಯ, ಶಶಿಕುಮಾರ್ ರಾವ್ ಪಡುಬಿದ್ರೆ, ಸುರೇಶ್ ಭಟ್ ಕುಂಟಾಡಿ, ವಾಸುದೇವ ಭಟ್ ಅವರ ಸಹಕಾರದೊಂದಿಗೆ ಜರಗಿತು.
ರಾತ್ರಿ ನಡೆದ ಮಹಾ ಅನ್ನದಾನವು ಬಂಟರ ಸಂಘ ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅರುಣೋದಯ ರೈ ದಂಪತಿ ಮತ್ತು ನಾರಾಯಣ ಪೂಜಾರಿ ದಂಪತಿ ಅವರ ವತಿಯಿಂದ ಆಯೋಜಿಸಲಾಗಿತ್ತು. ದೇವಸ್ಥಾನದ ಆಡಳಿತ ಮೊಕ್ತೇಸರ ಉದ್ಯಮಿ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಯಜಮಾನಿಕೆಯಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ಅಣ್ಣಿ ಶೆಟ್ಟಿ, ಸುಂದರ ಶೆಟ್ಟಿಗಾರ್, ಪ್ರಸನ್ನ ಶೆಟ್ಟಿ ಕುಂಜಾರು, ಸಕಾ³ಲ್, ಪ್ರಸನ್ನ ಶೆಟ್ಟಿ ಬೋಳ, ವೆಂಕಟೇಶ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ಸಂಪನ್ನಗೊಂಡವು.
ಪೂಜೆಯಲ್ಲಿ ಶಿಮಂತೂರು ಮಜಲಗುತ್ತು ಚಂದ್ರ ಶೆಟ್ಟಿ, ಭಾಸ್ಕರ ಶೆಟ್ಟಿ ಕಾಶಿಮೀರಾ, ಗೋಪಾಲ ಗಾಣಿಗ, ಜಯಶೀಲ ತಿಂಗಳಾಯ, ದಿನೇಶ್ ಶೆಟ್ಟಿ ಕಾಪುಕಲ್ಯ, ಗುಣಕಾಂತ್ ಕರ್ಜೆ, ಕರ್ನೂರು ಮೋಹನ್ ರೈ, ಗಣೇಶ್ ಎರ್ಮಾಳ್, ಡಾ| ರವಿರಾಜ್, ಲೀಲಾ ಪೂಜಾರಿ, ವಸಂತಿ ಶೆಟ್ಟಿ ಮೊದಲಾದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಉಡುಪಿಯ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಮಾನಂದ ಗುರೂಜೀ ಮತ್ತು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಭಟ್, ಥಾಣೆಯ ಶಾಸಕ ಪ್ರತಾಪ್ ಸರ್‌ನಾೖಕ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿದರು. ಅವರನ್ನು ದೇವಸ್ಥಾನದ ಪರವಾಗಿ ಶಿಮಂತೂರು ಮಜಲಗುತ್ತು ರಂಜನ್ ಶೆಟ್ಟಿ ಮತ್ತು ಆಡಳಿತ ಮಂಡಳಿಯವರು ಶಾಲು ಹೊದೆಸಿ ಗೌರವಿಸಿದರು.
ದೇವಸ್ಥಾನದ ಅಂಗಣದಲ್ಲಿ ಬಲಿಮೂರ್ತಿಯ ಮುಂಭಾಗದಲ್ಲಿ ಪೂಜಾ ಸಂಪನ್ನ ಸಂದರ್ಭದಲ್ಲಿ ಖುಷಿ ಹರೀಶ್ ಶೆಟ್ಟಿ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಮೀರಾರೋಡ್ ಲಕ್ಷ್ಮೀ ಭಜನ ಮಂಡಳಿಯ ಸದಸ್ಯರಿಂದ ಹಾಗೂ ವಿಜಯ ಶೆಟ್ಟಿ ಬೈಲೂರು ಅವರಿಂದ ಭಜನ ಕಾರ್ಯಕ್ರಮ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.