ಮುಂಬಯಿ: ಮೀರಾರೋಡ್ ಪೂರ್ವದ ಮೀರಾಗಾಂವ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಮಹಾಶಿವರಾತ್ರಿ ಮಹೋತ್ಸವವು ಫೆ. 13 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾದìನ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಸಂಜೆ ಪರಿವಾರ ದೇವರಿಗೆ ವಿಶೇಷ ಪೂಜೆ, ರಂಗಪೂಜೆ ಮತ್ತು ಮಹಾಪೂಜೆ ಜರಗಿತು.ಕಾರ್ಯಕ್ರಮದಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟ್ಸ್ ಸಂಘದ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು, ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ ಕುತ್ಯಾರು, ಯುವ ವಿಭಾಗದ ಸಾಯಿ ಪೂಂಜಾ, ಭಜನ ತರಬೇತಿ ಸಮಿತಿಯ ಶ್ರೀಧರ ಶೆಟ್ಟಿ, ತಬಲಾ ವಾದಕ ಶ್ರೀಕಾಂತ್ ಇವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಸಾಂತಿಂಜ ಜನಾರ್ದನ ಭಟ್ ಅವರು ಆಶೀರ್ವಚನ ನೀಡಿ, ಜಾಗರಣೆ ಮತ್ತು ಉಪವಾಸ ಶಿವರಾತ್ರಿಯ ವಿಶೇಷತೆಯಾಗಿದೆ. ಶ್ರದ್ಧಾಭಕ್ತಿಯ ಆರಾಧನೆ ಮೋಕ್ಷ ಪ್ರಾಪ್ತಿಯನ್ನು ಕಲ್ಪಿಸುತ್ತದೆ. ದೈಹಿಕ, ಮಾನಸಿಕ, ಬೌದ್ಧಿಕವಾಗಿ ಭಗವಂತನನ್ನು ಪ್ರಾರ್ಥಿಸಿ ಬದುಕನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕು ಎಂದರು.
ವೇದಿಕೆಯಲ್ಲಿ ಸ್ಥಾಪಕ ಕೃಷ್ಣ ಶೆಟ್ಟಿ, ಆಡಳಿತ ಮೊಕ್ತೇಸರ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ, ಅರ್ಚಕ ಸಾಂತಿಂಜ ಮಾಧವ ಭಟ್, ಟ್ರಸ್ಟಿಗಳು, ಸದಸ್ಯರು, ಅರ್ಚಕ ವೃಂದದವರು, ಮಹಿಳಾ ವಿಭಾಗದವರು ಉಪಸ್ಥಿತರಿದ್ದರು. ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಮತ್ತು ರಂಗನಟ ಜಿ. ಕೆ. ಕೆಂಚನಕೆರೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆದ ಭಜನೆಯಲ್ಲಿ ಕ್ರಮವಾಗಿ ಶ್ರೀ ದುರ್ಗಾ ಭಜನ ಮಂಡಳಿ ಮೀರಾರೋಡ್, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿ, ಶ್ರೀ ಹನುಮಾನ್ ಭಜನ ಮಂಡಳಿ, ಶ್ರೀ ಮಣಿಕಂಠ ಸೇವಾ ಸಂಘ ಭಾಯಂದರ್, ವಿಟuuಲ ಭಜನ ಮಂಡಳಿ ಮೀರಾರೋಡ್, ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿ ಮೀರಾರೋಡ್, ಶ್ರೀ ಬಾಲಾಜಿ ಸನ್ನಿಧಿ ಮೀರಾರೋಡ್, ಕರ್ನಾಟಕ ಮಹಾಮಂಡಲ ಭಾಯಂದರ್, ಬಂಟ್ಸ್ ಫೋರಂ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಸದ್ಗುರು ಭಜನ ಮಂಡಳಿ ಮೀರಾರೋಡ್ ಸದಸ್ಯರು ಪಾಲ್ಗೊಂಡಿದ್ದರು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್