ಎರ್ನಾಕುಲಂ: ಹಿರಿಯ ನಾಯಕಿ ಮೀರಾ ಜಾಸ್ಮಿನ್ ತಂದೆ ಜೋಸೆಫ್ ಫಿಲಿಪ್ ಅವರು ಗುರುವಾರ ಎರ್ನಾಕುಲಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಜೋಸೆಫ್ ಫಿಲಿಪ್ ಅವರು ಕೆಲವು ಸಮಯಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅರೋಗ್ಯ ಸಮಸ್ಯೆ ಹೆಚ್ಚಾದ ಪರಿಣಾಮ ಕಳೆದ ಕೆಲವು ದಿನದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದಾರೆ.
ಜೋಸೆಫ್ ಅವರು ಪತ್ನಿ ಮೀರಾ ಜಾಸ್ಮಿನ್ ಸೇರಿ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಮೀರಾ ಜಾಸ್ಮಿನ್ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಮೂರು ಭಾಷೆಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಕಾಲಕಾಲಕ್ಕೆ ಹೊಸ ಹೀರೋಯಿನ್‌ಗಳು ಇಂಡಸ್ಟ್ರಿಗೆ ಬರುತ್ತಿರುವುದರಿಂದ ಅವಕಾಶಗಳು ಕಡಿಮೆಯಾಗುತ್ತಾ ಹೋಗಿದೆ ಇದರಿಂದಾಗಿ ಅವರೇ ಸಿನಿಮಾ ಕ್ಷೇತ್ರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: Daily Horoscope: ಕ್ಷುಲ್ಲಕರ ಹಾವಳಿಗೆ ಅಂಜದಿರಿ, ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ