Advertisement
ಜು. 19ರಂದು ಮೀರಾರೋಡ್ ಪೂರ್ವದ ಮೀರಾ-ಭಾಯಂದರ್ ರೋಡ್ ಸಮೀಪದ ಪಯ್ಯಡೆ ಹೊಟೇಲ್ ಸಭಾಗೃಹದಲ್ಲಿ ನಡೆದು ಮುಂಬರುವ ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಸಕ್ತ ತುಳು-ಕನ್ನಡಿಗ ಅಭ್ಯರ್ಥಿಗಳ ವಿಚಾರ-ವಿನಿಮಯ, ಪೂರ್ವ ಸಿದ್ಧತೆಗಳ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ವಿವಿಧ ರಾಜಕೀಯ ಪಕ್ಷಗಳ ನೇತಾರರು ತುಳು ಕನ್ನಡಿಗರ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದ್ದಾರೆ. ಮತದಾನದ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಹಕರಿಸಿದ್ದೇವೆ. ಇಂದು ನಮಗೆ ಸನ್ನಿವೇಶ, ಸಂದರ್ಭಗಳು ಕೂಡಿ ಬಂದಿವೆ. ಇದೇ ಅವಕಾಶವನ್ನು ಸದುಪಯೋಗಿಸಿಕೊಂಡು ತುಳು-ಕನ್ನಡಿಗರ ಜನ ಸಂಖ್ಯೆಯ ಶಕ್ತಿ ಪ್ರದರ್ಶಿಸಿ ಆದಷ್ಟು ಹೆಚ್ಚಿನ ರಾಜಕೀಯ ಪಕ್ಷವಾಗಲಿ, ಸ್ವತಂತ್ರ ಅಭ್ಯರ್ಥಿಯಾಗಲಿ ಅವರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ನಮ್ಮ ನಗರ ಸೇವಕರಿಂದ ಅನೇಕ ಸಮಸ್ಯೆಗಳು ಸರಕಾರದ ಗಮನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
Related Articles
Advertisement
ಟಿಕೆಟ್ ಆಕಾಂಕ್ಷಿಗಳಾದ ಉದಯ ಹೆಗ್ಡೆ ಎಲಿಯಾಳ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ಚೇತನ್ ಶೆಟ್ಟಿ ಮೂಡಬಿದ್ರೆ, ಲೀಲಾ ಡಿ. ಪೂಜಾರಿ, ಉದಯ ಶೆಟ್ಟಿ ಪೆಲತ್ತೂರು, ರವಿ ಶೆಟ್ಟಿ ಕೊಟ್ರಪಾಡಿ, ಅಮಿತಾ ಶೆಟ್ಟಿ ಅವರು ಮಾತನಾಡಿದರು.
ಅಭ್ಯರ್ಥಿಗಳು ತಮ್ಮ ವ್ಯಾಪ್ತಿ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಗಮನ ಇರಬೇಕು. ಸದಾ ಜನರೊಂದಿಗೆ ಬೆರೆತು ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕು – ಜಯಪ್ರಕಾಶ್ ಶೆಟ್ಟಿ (ರಾಷ್ಟ್ರೀಯ ಸ್ತರದ ರಾಜಕೀಯ ಸಲಹೆಗಾರ). ಪ್ರತಿಯೊಂದು ವಾರ್ಡ್‌ನಲ್ಲಿ ವಿವಿಧ ಪಕ್ಷಗಳ ನಾಲ್ಕು ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು. ಪ್ರತಿಯೊಬ್ಬರೂ ನಾಲ್ಕು ಮತ ಚಲಾಯಿಸಬೇಕಾಗುತ್ತದೆ. ವಾರ್ಡ್ ವಿಸ್ತಾರವಾಗಿದ್ದು, ಸುಮಾರು 21 ಸಾವಿರದಿಂದ 30 ಸಾವಿರ ಮತದಾರರನ್ನು ಸಂಪರ್ಕಿಸಬೇಕಾಗಿದೆ
– ಸಂತೋಷ್ ರೈ ಬೆಳ್ಳಿಪಾಡಿ (ಗೌರವಾಧ್ಯಕ್ಷ: ಬಂಟ್ಸ್ ಫೋರಂ ಮೀರಾ-ಭಾಯಂದರ್). ರಾಜಕೀಯ ಪ್ರವೇಶದ ಪೂರ್ವ ತಯಾರಿ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ದುಡಿದ ಅನುಭವ ಹೊಂದಿರಬೇಕು. ಮೈಮನಸ್ಸು, ವೈರತ್ವ ಮರೆತು ಸಮ ಬಾಳ್ವೆಯಿಂದ ಬಾಳಬೇಕು
– ಮಹಾಬಲ ಸಮಾನಿ (ಅಧ್ಯಕ್ಷರು: ಭಗವಾನ್‌ಶ್ರೀ ನಿತ್ಯಾನಂದ ಸೇವಾ ಸಮಿತಿ ಮೀರಾರೋಡ್). ತುಳು-ಕನ್ನಡಿಗ ಒಕ್ಕೂಟ ರಚನೆಯಾಗಬೇಕು. ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರಕಬೇಕು ಎಂಬ ಪ್ರಯತ್ನ 2007ರಲ್ಲಿ ನಡೆದಿತ್ತು. ಇಂದು ಗರಿಗೆದರಿ ಹೆಮ್ಮರವಾಗಿದೆ. ಎಲ್ಲರಿಗೂ ಸಮಾನ ಹಕ್ಕು ದೊರಕಿಸಲು ಆಸಕ್ತ ಆಕಾಂಕ್ಷಿಗಳು ಮುಂದಾಗಬೇಕು. ತಮ್ಮ ಸೇವೆ ಮುಂದೆ ಮಾನವ ಹಕ್ಕುಗಳ ಸಂರಕ್ಷಣೆಯಾಗಬೇಕು
-ದುರ್ಗಾಪ್ರಸಾದ್ ಸಾಲ್ಯಾನ್ ಅಧ್ಯಕ್ಷ : ವ್ಯಾಪಾರಿ ಸಂಘಟನೆ).