Advertisement
ನಾರದರ ಮಾತಿನಂತೆ ಈರ್ವರ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯವಾಗುತ್ತದೆ. ಮೀನಾಕ್ಷಿಯಾಗಿ ಭಾಗೀರಥಿ ಎಂ. ರಾವ್ ಅವರು ತನ್ನ ಲವಲವಿಕೆಯ ಹೆಜ್ಜೆ ಮತ್ತು ಧೀರತನದ ಮಾತಿನ ಶೈಲಿಯ ಮೂಲಕ ಪಾತ್ರವನ್ನು ಅನಾವರಣಗೊಳಿಸಿದ ಪರಿ ಸೊಗಸಾಗಿತ್ತು. ಶೂರಸೇನನ ಗಾಂಭೀರ್ಯತೆ ಮತ್ತು ಈಶ್ವರನ ಕೋಪಾವೇಷವನ್ನು ನಾಗರತ್ನಾ ಹೇಳೆìಯವರು ಉತ್ತಮವಾಗಿ ಅಭಿವ್ಯಕ್ತಿಗೊಳಿಸಿದ್ದರು. ಪದ್ಮಗಂಧಿನಿಯಾಗಿ ಕು| ಸಹನಾರವರ ಪಾತ್ರ ನಿರ್ವಹಣೆ ಚೆನ್ನಾಗಿದ್ದು, ಮಂತ್ರಿ ವೀರಸೇನನಾಗಿ ಕು| ವಿಶ್ರುತಾ ಹೇಳೆì, ನಾರದ ಮತ್ತು ನಂದಿಯಾಗಿ ಗಾಯತ್ರಿ ಶಾಸ್ತ್ರಿಯವರು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಬಾಲಗೋಪಾಲರಾಗಿ ಮಾ| ವಿಭಾವನ ಹೇಳೆì ಮತ್ತು ಮಾ| ಸೃಜನ್ ಕುಂದರ್, ಪೀಠಿಕಾ ಸ್ತ್ರೀವೇಷದಲ್ಲಿ ಮಾ| ರೋಹನ್ ಹೆಬ್ಟಾರ್ ಮತ್ತು ಮಾ| ಪ್ರಣವ್ ಹೊಳ್ಳ ಇವರುಗಳು ಪೂರ್ವರಂಗದ ಚೆಲುವನ್ನು ಹೆಚ್ಚಿಸಿದರೆ, ಭಾಗವತರಾಗಿ ಉದಯ ಕುಮಾರ್ ಹೊಸಾಳ, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು. ವೇಷಭೂಷಣ ಬಾಲಕೃಷ್ಣ ನಾಯಕ್ ಹಂದಾಡಿಯವರದ್ದಾಗಿತ್ತು. ಎರಡು ಗಂಟೆ ಅವಧಿಯ ಈ ಯಕ್ಷಗಾನ ಪ್ರೇಕ್ಷಕರಿಂದ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು.
Advertisement
ವರ್ಷಾಕಾಲದ ನಡುವೆ ಮೀನಾಕ್ಷಿ ಕಲ್ಯಾಣ
06:00 AM Jul 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.