Advertisement
ವಿದ್ಯಾಭ್ಯಾಸದಿಂದ ದೂರವಾಗಿಯೇ ಉಳಿದಿರುವ ಕೊರಗ ಸಮುದಾಯದಲ್ಲಿ ಒಂದಿಬ್ಬರೂ ತಮ್ಮದೇ ಸಾಧನೆಯಿಂದ ಮೇಲೆ ಬಂದಾಗಲೂ ಅದನ್ನು ಗುರುತಿಸದಿದ್ದರೆ ಅಳಿಸಿ ಹೋಗುವುದು ಕೇವಲ ಆಕೆಯೊಬ್ಬಳ ಕನಸಲ್ಲ. ಒಂದಿಡೀ ಸಮುದಾಯದ ನಿರೀಕ್ಷೆ.
ದುಃಖೀಸುತ್ತಾರೆ ಮೀನಾಕ್ಷಿ.
Related Articles
ಕೆಲವು ವರುಷಗಳ ಮೊದಲು ಮೀನಾಕ್ಷಿ ಎಂಎ ಪೂರೈಸಿದಾಗ ಸಂಘ-ಸಂಸ್ಥೆಗಳು ಗುರುತಿಸಿ ಶಾಸಕರ ಮೂಲಕ ಅಭಿನಂದಿಸಿದ್ದವು. ಮಾಧ್ಯಮಗಳ ಮೂಲಕ ಆಕೆಯ ಸಾಧನೆ ಪ್ರಚುರವಾದಾಗ ಆದಿವಾಸಿ ಇಲಾಖೆಯವರು ಆರು ತಿಂಗಳ ತಾತ್ಕಾಲಿಕ ಉದ್ಯೋಗವನ್ನೂ ನೀಡಿದರು.
Advertisement
ಮೀನಾಕ್ಷಿಗೆ “ಆದಿವಾಸಿ ಅತಿಥಿ’ಯಾಗಿ ದಿಲ್ಲಿಯ ರಾಷ್ಟ್ರಪತಿ ಭವನಕ್ಕೆ ಹೋಗುವ ಅವಕಾಶ ಲಭಿಸಿತ್ತು. ಬಳಿಕ ಎಲ್ಲರೂ ಆಕೆಯನ್ನು ಮರೆತುಬಿಟ್ಟಿದ್ದಾರೆ.
ಮೀನಾಕ್ಷಿಯ ಎಂಫಿಲ್ ಪದವಿ ಹಿಂದೆ ಅದೆಷ್ಟೋ ನಿರೀಕ್ಷೆಗಳಿವೆ. ಅದು ಅವರ ವೈಯಕ್ತಿಕ ಹಿತಾಸಕ್ತಿಗಿಂತಲೂ ಸಮಾಜದ ಅಭ್ಯುದಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ಸರಕಾರ ಆಕೆಗೆ ಉದ್ಯೋಗ ನೀಡುವ ಮೂಲಕ ತಳಮಟ್ಟದಲ್ಲಿರುವ ಜನಸಮೂಹವನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು.– ಡಾ| ರತ್ನಾಕರ ಮಲ್ಲಮೂಲೆ, ಪ್ರಾಧ್ಯಾಪಕ, ಸರಕಾರಿ ಕಾಲೇಜು ಕಾಸರಗೋಡು ಮೀನಾಕ್ಷಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದು ಇಂದಿನ ಅಗತ್ಯ. ಇದು ಅವರ ಸಮುದಾಯದ ಇತರರೂ ಉನ್ನತ ವಿದ್ಯಾಭ್ಯಾಸ ಪಡೆಯಲು ಪ್ರೇರಣೆಯಾಗಲಿದೆ.
– ಡಾ| ರಾಜೇಶ್ ಬೆಜ್ಜಂಗಳೆ, ನಿರ್ದೇಶಕರು, ಕನ್ನಡ ವಿಭಾಗ ಭಾರತೀಯ ಭಾಷಾ ಅಧ್ಯಯನಾಂಗ ಸಂಸ್ಥೆ ಕಣ್ಣೂರು ವಿ.ವಿ