ಬ್ರಹ್ಮಾವರ: ಮನುಷ್ಯನ ಜೀವನದಲ್ಲಿ ಬಡತನ ಹೋಗಲಾಡಿಸಲು ಕಠಿಣ ದುಡಿಮೆಯ ಪ್ರಯತ್ನ ಮುಖ್ಯ. ಜತೆಗೆ ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರನಾಗಿ ಮೋಕ್ಷ ಪಡೆಯುವಂತಹ ಇನ್ನೊಂದು ಪ್ರಯತ್ನವನ್ನೂ ಆತ ಮಾಡಬೇಕು ಎಂದು ವಿಶ್ವಕರ್ಮ ಜಗದ್ಗುರು ಪೀಠ ಹಾಸನ ಅರೇ ಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಪೀಠಾಧಿಪತಿ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಮುದ್ದೂರು ಕಜ್ಕೆಯ ಶಾಖಾ ಮಠದಲ್ಲಿ ತಮ್ಮ 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿಶ್ವಕರ್ಮರು ಧಾರ್ಮಿಕ ಪ್ರಪಂಚಕ್ಕೆ ಕೊಟ್ಟ ಕೊಡುಗೆ ಸಾಕಷ್ಟಿದೆ. ಎಲ್ಲ ಧರ್ಮಗಳವರ ಧಾರ್ಮಿಕ ಕೇಂದ್ರಗಳ ಕಟ್ಟಡ ರಚನೆ, ಕೆತ್ತನೆ, ಮೂರ್ತಿ ರಚನೆಯನ್ನು ಮಾಡುವ ವಿಶ್ವಕರ್ಮರು ಸರ್ವಧರ್ಮಕ್ಕೂ ಬೇಕಾದವರು ಎಂದರು.
ಚಾತುಮಾಸ್ಯ ವ್ರತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಸಾೖಬ್ರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಭೀಮಸೇನ ಬಡಿಗೇರ ಧಾರ್ಮಿಕ ಉಪನ್ಯಾಸ ನೀಡಿದರು. ಪ್ರಮುಖರಾದ ಕೆ. ವಾದಿರಾಜ ರಾವ್ ನೇಜಾರು, ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ ಮಾರ್ನಬೈಲು, ಕಾರ್ಕಳದ ಪ್ರಕಾಶ್ ಆಚಾರ್ಯ, ನಾಗರಾಜ ಆಚಾರ್ಯ ಅಲೆವೂರು, ಚಿನ್ನಪ್ಪ ಪತ್ತಾರ್, ಚಂದ್ರಶೇಖರ ಆಚಾರ್ಯ ಹಾಸನ, ನರೇಂದ್ರ ಆಚಾರ್ಯ ಹಾಸನ, ಸುಬ್ರಹ್ಮಣ್ಯ ಆಚಾರ್ಯ ಮೈಸೂರು, ಬೆಂಗಳೂರಿನ ಕೃಷ್ಣವೇಣಿ, ಪ್ರಕಾಶ ಆಚಾರ್ಯ ನೇರಂಬಳ್ಳಿ, ಜಿ.ಎಸ್. ಚಂದ್ರ ಆಚಾರ್ಯ ಗೋಳಿಯಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಕಜ್ಕೆ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಪ್ರಾಸ್ತಾವನೆಗೈದರು. ರವಿಚಂದ್ರ ಆಚಾರ್ಯ ಮಾರಾಳಿ ಸ್ವಾಗತಿಸಿ, ಶಿಲ್ಪಿ ಶ್ರೀಧರ ಆಚಾರ್ಯ ಬಂಡಿಮಠ ವಂದಿಸಿದರು. ಬಾರ್ಕೂರು ಪುರೋಹಿತ್ ದಾಮೋದರ ಶರ್ಮ, ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು.ಚಾತುರ್ಮಾಸ್ಯ ಸಂಕಲ್ಪದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.