Advertisement

ಶಿಲೆಯ ನಡುವೆ ಕಲೆಯ ಧ್ಯಾನ

03:14 PM Nov 04, 2017 | |

ಬೆಂಗಳೂರಿಗರಿಗೆ ಐ.ಟಿ. ಪಾರ್ಕ್‌, ಟೆಕ್‌ ಪಾರ್ಕ್‌ಗಳು ಹೊಸತೇನಲ್ಲ. ಆದರೆ, ಚಿತ್ರಕಲೆ, ಶಿಲ್ಪಕಲೆಗೆಂದೇ ಮೀಸಲಾಗಿರುವ ಪಾರ್ಕ್‌ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಅಂಥದ್ದೊಂದು ಪಾರ್ಕ್‌ ಇರುವುದು ರವೀಂದ್ರ ಕಲಾಕ್ಷೇತ್ರದ ಎದುರಿಗೆ. ಅಲ್ಲಿ ಸುಂದರ ಹುಲ್ಲು ಹಾಸಿನ ನಡುವೆ, ಮರಗಳ ನೆರಳಿನಲ್ಲಿ ಶಿಲ್ಪ ಕಲಾಕೃತಿಗಳಿದ್ದು, “ಶಿಲ್ಪವನ’ ಎಂಬ ಹೆಸರು ಪಡೆದಿದೆ.

Advertisement

ಶಿಲ್ಪವನದ ಸೌಂದರ್ಯವನ್ನು ಗಮನಿಸಿದ ನಾಡಿನ ಹಿರಿಯ ಚಿತ್ರಕಲಾವಿದ ಎಸ್‌.ಜಿ. ವಾಸುದೇವ ಅವರು ಅದಕ್ಕೆ ಕಲಾರೂಪ ನೀಡಲು ಆಲೋಚಿಸಿದರು. ನಂತರ ಅಲ್ಲಿ, ಚಿತ್ರಕಲಾವಿದರೆಲ್ಲ ಒಟ್ಟಿಗೆ ಸೇರುವ ನಿಸರ್ಗ ವೇದಿಕೆ ಸೃಷ್ಟಿಸಿ ಅದನ್ನು “ಆರ್ಟ್‌ ಪಾರ್ಕ್‌’ ಎಂದು ಕರೆದರು. ಹೀಗೆ ಕಳೆದ ನಾಲ್ಕು ವರ್ಷಗಳಿಂದ, ಪ್ರತಿ ತಿಂಗಳ ಮೊದಲ ಭಾನುವಾರ ನಾಡಿನ ಬೇರೆ ಬೇರೆ ಭಾಗಗಳ ಚಿತ್ರಕಲಾವಿದರೆಲ್ಲ ಒಟ್ಟಿಗೆ ಸೇರಿ ಚಿತ್ರರಚನೆ, ಕಲಾಸಂವಾದ, ಚರ್ಚೆ ನಡೆಸುತ್ತಾರೆ ಹಾಗೂ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ರಾಜ್ಯದ ಬೇರೆ ಬೇರೆ ಭಾಗಗಳ 25-30 ಕಲಾವಿದರು ಇಲ್ಲಿ ಒಟ್ಟಿಗೆ ಸೇರುತ್ತಾರೆ. ಎಲ್ಲರಿಗೂ ಹಾಳೆ, ಬಣ್ಣ , ಕುಂಚಗಳನ್ನು ಒದಗಿಸಲಾಗುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಅವರು ತಮ್ಮ ಕಲ್ಪನೆಗೆ ಬಣ್ಣ ತುಂಬುತ್ತಾರೆ. ಅವರ ಮಾರ್ಗದರ್ಶನಕ್ಕೆ ಹಿರಿಯ ಕಲಾವಿದರೂ ಉಪಸ್ಥಿತರಿರುತ್ತಾರೆ. ತಿಂಗಳ ಈ ಕಾರ್ಯಕ್ರಮವನ್ನು 15 ಸದಸ್ಯರ ತಂಡವೊಂದು ಆಯೋಜಿಸುತ್ತದೆ.

ಸಂಗೀತ, ಸಾಹಿತ್ಯ, ಸಿನಿಮಾ, ರಾಜಕೀಯ, ವೈದ್ಯಕೀಯ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರದ ದಿಗ್ಗಜರೂ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುತ್ತಾರೆ. ಹಾಡುಗಾರಿಕೆ, ನೃತ್ಯ, ಕವನ ವಾಚನ…ಹೀಗೆ ಕಲಾ ವಾತಾವರಣವೊಂದು ಇಲ್ಲಿ ಮನೆ ಮಾಡುತ್ತದೆ. ಕಲಾಕೃತಿಗಳನ್ನು ನೇರವಾಗಿ ಕಲಾವಿದರಿಂದಲೇ ಖರೀದಿಸಬಹುದು. ಕಾರ್ಯಕ್ರಮ ನೋಡಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ನಾಳೆ ಏನ್‌ ನಡೆಯುತ್ತೆ? 
ಈ ವಾರ “ಆರ್ಟ್‌ ಪಾರ್ಕ್‌’ನಲ್ಲಿ ಕಲಾವಿದ, ಕಲಾ ವಿಮರ್ಶಕ ಮತ್ತು ಕಲಾ ಇತಿಹಾಸ ತಜ್ಞ ಸುರೇಶ್‌ ಜಯರಾಮ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ. ಡಾ. ರೇಶ್ಮಾ ರಮೇಶ್‌ ಅವರ ಸ್ವರಚಿತ ಕವನ ವಾಚನವೂ ನಡೆಯಲಿದೆ. ಕಲಾವಿದರಾದ ಅಗ್ನಿ ಜಾನಕಿರಾಂ, ಪ್ರವೀಣ್‌. ಕೆ, ವಿವೇಕ್‌, ಅಭಿಷೇಕ್‌ ಹೆಗ್ಡೆ, ಸೋಮೇಶ್‌ ಕೊಳ್ಳೆಗಾಲ್‌, ಕೃಷ್ಣಮೂರ್ತಿ,

Advertisement

ಸಿಂಧು ನಾಗರಾಜ್‌, ಸ್ಯಾಮ್ಸನ್‌ ಆ್ಯಂಥೋನಿ, ಅಲೋಕ್‌ ರಂಜನ್‌, ಸೋಮಶೇಖರ್‌. ಎಂ, ಅಭಿಷೇಕ್‌ ಅಚ್ಯುತ, ಶ್ರಿಷ್ಠಿ, ದೀಪಿಕಾ, ಅಶೋಕ್‌.ಯು, ಶಹನಾ. ಎಸ್‌, ಮ್ರಿಣಾಲಿನಿ ಬಿ.ಎಂ, ರೋಶಿನಿ. ಎಸ್‌, ಲಕ್ಷ್ಮಿನಾರಾಯಣ್‌, ಮೇಘಾ ಜೆ. ಶೆಟ್ಟಿ, ಗೋಕುಲ ಪ್ರಿಯ, ಶ್ರೇಯಾ ನಂಬಿಯಾರ್‌, ದೀಕ್ಷಾ, ಸೋಮಶೇಖರ್‌.ಕೆ, ಸುನಿತಾ ಚಲ್ಕಪುರಿ, ಲಕ್ಷ್ಮಿಬಾಯಿ, ಅರ್ಪಿತಾ. ಟಿ, ರಾಯಲ್‌ ಕ್ರಿಸ್‌, ಸಂಜನಿ. ಜಿ ಭಾಗವಹಿಸಲಿದ್ದಾರೆ. 

ಎಲ್ಲಿ?: ಶಿಲ್ಪವನ, ರವೀಂದ್ರ ಕಲಾಕ್ಷೇತ್ರ ಎದುರು
ಯಾವಾಗ?: ನ.5, ಭಾನುವಾರ ಬೆ. 11-5
ಸಂಪರ್ಕ: 9844830382, 9916419351

* ವೀರೇಶ ರುದ್ರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next