Advertisement
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಅನೇಕ ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ಧ್ಯಾನವನ್ನು ಒಳಗೊಂಡಿರುತ್ತವೆ,ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಅವರ ಒತ್ತಡ ಮತ್ತು ಗೊಂದಲವನ್ನು ಕಡಿಮೆ ಮಾಡಲು ಸಹಾಯಕ.
Related Articles
Advertisement
3.ಶೈಕ್ಷಣಿಕ ಕಾರ್ಯಕ್ಷಮತೆ ವೃದ್ಧಿ: ದಿನಂಪ್ರತಿಯ ಅಭ್ಯಾಸ ವಿದ್ಯಾರ್ಥಿಗಳ ಗೊಂದಲವನ್ನು ಕಡಿಮೆ ಮಾಡಲು ಮತ್ತು ಅವರ ಅಧ್ಯಯನದ ಕಾರ್ಯಕ್ಷಮತೆಯನ್ನು ಸುಧಾರಿಸಲು ಧ್ಯಾನ ಪರಿಣಾಮಕಾರಿ ಮಾರ್ಗವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
4.ವರ್ದಿತ ಸ್ವಯಂ ಅರಿವು ಮತ್ತು ಜ್ಞಾನ: ಜ್ಞಾನ ವನ್ನು ಪಡೆ ಯಲು ಸಹಾಯಮಾಡಿ ಸ್ವಯಂ ಅರಿವನ್ನು ವೀಕ್ಷಿಸಲು ಇದು ಅನುಮತಿಸುತ್ತದೆ ನಿಯಮಿತ ಧ್ಯಾನದ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಸ್ವಯಂ-ಅರಿವು ಮತ್ತು ಜ್ಞಾನವನ್ನು ಬೆಳೆಸಿಕೊಳ್ಳುತ್ತಾರೆ ಇದು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಕಾರಣವಾಗುತ್ತದೆ ಏಕೆಂದರೆ ವಿದ್ಯಾರ್ಥಿಗಳು ತಮ್ಮ ಗುರಿ ಮತ್ತು ಆಸೆಗಳನ್ನು ಹೆಚ್ಚು ಅರಿತು ಕೊಳ್ಳುತ್ತಾರೆ.
5.ಒತ್ತಡ ನಿಯಂತ್ರಕ: ಉತ್ತಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ತುಂಬಾ ಒತ್ತಡ ಮತ್ತು ಸವಾಲಾಗಿದೆ, ಅದು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತದೆ ವಿದ್ಯಾರ್ಥಿಗಳು ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಧ್ಯಾನವನ್ನು ಸೇರಿಸುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಇದರಿಂದ ಶಾಂತಿ ಮತ್ತು ಸಾವಧಾನತೆ ಪಡೆಯಬಹುದು.
6.ಮಾನಸಿಕ ಆರೋಗ್ಯವನ್ನು ಹೆಚ್ಚಿಸುವುದು: ನಿಯಮಿತ ಧ್ಯಾನವು ಮಾನಸಿಕ ಆರೋಗ್ಯವನ್ನು ಸುಧಾರಿಸಿ ನಕಾರಾತ್ಮಕ ಆಲೋಚನೆ, ಆತಂಕವನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳ ದಿನನಿತ್ಯದ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳುವುದು ಅವರಿಗೆ ಉತ್ತಮ ಮಾನಸಿಕ ಆರೋಗ್ಯವನ್ನು ನೀಡುತ್ತದೆ ವಿದ್ಯಾರ್ಥಿಗಳು ಮಾನಸಿಕವಾಗಿ ಉತ್ತಮವಾಗಿದ್ದರೆ ಶೈಕ್ಷಣಿಕ ಸಾಧನೆ ಉತ್ತಮವಾಗಿರುತ್ತದೆ.
7.ಜ್ಞಾಪಕ ಶಕ್ತಿ ಹೆಚ್ಚುತ್ತದೆ: ಧ್ಯಾನ ಅರಿವಿನ ಕಾರ್ಯ, ಮಾಹಿತಿ ಧಾರಣೆ ಸುಧಾರಿಸಲು ಮತ್ತು ವರ್ಧಿಸಲು ಪ್ರಯತ್ನಿಸುತ್ತದೆ.
8.ಗುಣಮಟ್ಟದ ನಿದ್ರೆ: ದೇಹ ಮತ್ತು ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಗುಣಮಟ್ಟದ ನಿದ್ರೆ ಬಹಳ ಮುಖ್ಯ. ನಿಯಮಿತ ಧ್ಯಾನ ಮಾಡುವ ವಿದ್ಯಾರ್ಥಿಗಳು ಆರೋಗ್ಯಕರ ನಿದ್ರೆಯನ್ನು ಪಡೆಯುತ್ತಾರೆ ಏಕೆಂದರೆ ಇದು ವಿದ್ಯಾರ್ಥಿಗಳ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡಿ ಯಾವುದೇ ತೊಂದರೆ ಇಲ್ಲದೆ ಸಾಕಷ್ಟು ಗುಣಮಟ್ಟದ ನಿದ್ರೆಯನ್ನು ಪಡೆಯಲು ಅಗತ್ಯವಾಗಿರುತ್ತದೆ ನಿದ್ರೆಯ ಕೊರತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
9. ಖಿನ್ನತೆ ನಿವಾರಕ: ಖಿನ್ನತೆ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಖನ್ನತೆಯನ್ನು ಕಡಿಮೆ ಮಾಡಲು ಕನಿಷ್ಠ 15-20 ನಿಮಿಷಗಳ ಕಾಲದ ಧ್ಯಾನದ ಅಭ್ಯಾಸ ಅವರ ಮನಸ್ಸನ್ನು ಶಾಂತಗೊಳಿಸುತ್ತದೆ.
10.ದುಶ್ಚಟಗಳ ಮುಕ್ತಿ ಕಾರಕ: ಕೆಲವು ಯುವಕರು ಧೂಮಪಾನ, ಮದ್ಯಪಾನ, ತಂಬಾಕು, ಕೊಕೇನ್ ಅಥವಾ ಡ್ರಗ್ಸ್ ಇತ್ಯಾದಿ ಕೆಟ್ಟ ವ್ಯಸನಗಳಿಗೆ ದಾಸರಾಗಿದ್ದು, ಇವು ಅವರ ಪ್ರಾಣವನ್ನು ಕಸಿದುಕೊಳ್ಳುತ್ತದೆ ದಿನನಿತ್ಯದ ಜ್ಞಾನದ ಅಭ್ಯಾಸ ಇವುಗಳ ಚಟದಿಂದ ಮುಕ್ತಿ ನೀಡುತ್ತದೆ ಅಥವಾ ಹವ್ಯಾಸವಾಗದಂತೆ ತಡೆಯುತ್ತದೆ.
ಡಾ| ಸುಧಾಕರ ಜಿ. ಲಕ್ಕವಳ್ಳಿ