Advertisement

ಬಸವಣ್ಣನ ಐಕ್ಯಸ್ಥಳದಲ್ಲಿ ಸಚಿವರಿಂದ ಧ್ಯಾನ

05:29 PM Apr 19, 2018 | |

ಕೂಡಲಸಂಗಮ: ಬಸವ ಜಯಂತಿ ನಿಮಿತ್ತ ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆಯಲು ಕುಟುಂಬ ಸಮೇತವಾಗಿ ಬಂದಿರುವುದಾಗಿ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.

Advertisement

ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಕೆಲವು ಮಠಾಧಿಧೀಶರಿಗೆ ಬಸವಣ್ಣನೆ ಸದ್ಬುದ್ಧಿ ಕೊಡಲಿ. ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಸಹಕಾರಿಯಾಗುತ್ತವೆ. ನಾನು ಬಸವ ತತ್ವದಲ್ಲಿ ನಂಬಿಕೆ ಇಟ್ಟವನು. ಬಸವ ತತ್ವ ನಂಬಿದವರಿಗೆ ಎಂದು ಸೋಲಾಗಿಲ್ಲ. ನಾನು ಈಗಾಗಲೇ ನನ್ನ ಮತ ಕ್ಷೇತ್ರದಲ್ಲಿ ಚುಣಾವಣೆ ಪ್ರಚಾರ ಕಾರ್ಯ ಆರಂಭಿಸಿರುವೆ. ಏ. 20ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ಬೆಳಗ್ಗೆ 11:30ಕ್ಕೆ ಸುಕ್ಷೇತ್ರಕ್ಕೆ ಆಗಮಿಸಿದ ಸಚಿವ ಎಂ.ಬಿ. ಪಾಟೀಲ ನೇರವಾಗಿ ಬಸವಣ್ಣನ ಐಕ್ಯ ಸ್ಥಳಕ್ಕೆ ತೆರಳಿ 20 ನಿಮಿಷ ಧ್ಯಾನ, ಸಂಕಲ್ಪ ಮಾಡಿದರು. ಪತ್ನಿ ಆಶಾ ಪಾಟೀಲ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಕೂಡಾ ಧ್ಯಾನದಲ್ಲಿ ಭಾಗಿಯಾದರು. ನಂತರ ಕ್ಷೇತ್ರಾಧಿಪತಿ ಸಂಗಮನಾಥ ದರ್ಶನ ಪಡೆದು ಗಣೇಶ ದೇವಸ್ಥಾನ, ಜಾತವೇದ ಮುನಿಗಳ ಗದ್ದುಗೆ ವೀಕ್ಷಿಸಿದರು.

ಕೆಲವು ಮುಖಂಡರು ಮೊದಲು ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ ಪಡೆಯಬೇಕು ಎಂದು
ಸಲಹೆ ಕೊಟ್ಟ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ ಬಸವಣ್ಣನ ಐಕ್ಯ ಮಂಟಪ ದರ್ಶನ ನಂತರ ಸಂಗಮನಾಥನ ದರ್ಶನ ಮಾಡೋಣ ಎಂದರು.

ಬಸವೇಶ್ವರ ಐಕ್ಯ ಮಂಟಪದಲ್ಲಿ ಎಂ.ಬಿ. ಪಾಟೀಲ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಎಂ.ಬಿ. ಪಾಟೀಲ, ಆಶಾ ಪಾಟೀಲ ಅವರನ್ನು ಸನ್ಮಾನಿಸಿದರು.

Advertisement

ಪುತ್ರ ಧ್ರುವ ಪಾಟೀಲ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಕೆಪಿಸಿಸಿ ಸದಸ್ಯ ಚಂದ್ರಕಾಂತ ಶೆಟ್ಟಿ,ಪ್ರಶಾಂತ ದೇಸಾಯಿ, ಗಂಗಣ್ಣ ಬಾಗೇವಾಡಿ, ಗಂಗಾಧರ ದೊಡಮನಿ, ಶೇಖರಗೌಡ ಗೌಡರ ಇದ್ದರು. ಬಸವಣ್ಣನ ಐಕ್ಯ ಸ್ಥಳಕ್ಕೆ ನಮಸ್ಕರಿಸಿ, ಎಂ.ಬಿ.ಪಾಟೀಲ, ಆಶಾ ಪಾಟೀಲ, ವಿಜಯಾನಂದ ಕಾಶಪ್ಪನವರ, ವೀಣಾ ಕಾಶಪ್ಪನವರ ಧ್ಯಾನಕ್ಕೆ ಕುಳಿತರು. 10 ನಿಮಿಷಕ್ಕೆ ವಿಜಯಾನಂದ, ವೀಣಾ ಧ್ಯಾನ ಮುಕ್ತಾಯಗೊಳಿಸಿದರು. 15 ನಿಮಿಷಕ್ಕೆ ಆಶಾ ಪಾಟೀಲ ಧ್ಯಾನ ಮುಕ್ತಾಯಗೊಳಿಸಿದರೆ ಎಂ.ಬಿ.ಪಾಟೀಲ ಒಬ್ಬರೆ 20 ನಿಮಿಷ ಧ್ಯಾನ, ಸಂಕಲ್ಪ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next