Advertisement

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

01:42 AM Oct 04, 2024 | Team Udayavani |

ಹೊಸದಿಲ್ಲಿ: ಔಷಧ, ಆರೋಗ್ಯ ವಿಮೆ ಸೇರಿೆ ಜನಸಾಮಾನ್ಯರು ಬಳಕೆ ಮಾಡು ತ್ತಿರುವ ಪ್ರಮುಖ ಸರಕು- ಸೇವೆಗಳ ಮೇಲಿನ ಬೆಲೆಗಳು ಶೇ.5 ಇಳಿಕೆ ಯಾಗುವ ಸಾಧ್ಯತೆಗಳಿವೆ. ಸರಕು- ಸೇವೆಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ಪ್ರಮಾಣ ಪರಿಶೀಲಿ ಸುವ ನಿಟ್ಟಿನಲ್ಲಿ ಬಿಹಾರ ಡಿಸಿಎಂ ಸಾಮ್ರಾಟ್‌ ಚೌಧರಿ ನೇತೃತ್ವದ ಸಚಿವರ ಸಮಿತಿ ಬಗ್ಗೆ ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ.

Advertisement

ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.12ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ. Term insurance ಗೆ ಶೇ.5ರಷ್ಟು ಜೆಎಸ್‌ಟಿ ವಿಧಿಸಲಾಗುತ್ತದೆ ಎನ್ನಲಾಗಿದೆ. ಟ್ರ್ಯಾಕ್ಟರ್‌ಗಳಿಗೆ ಅವುಗಳ ಸಾಮರ್ಥ್ಯ ಕ್ಕನುಗುಣವಾಗಿ ಶೇ.12 ಅಥವಾ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾ ಗುತ್ತಿದೆ. ಸಿಗರೆಟ್‌ ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಅ.19ರಂದು ಸಚಿವರ ಸಮಿತಿ ಸಭೆ ನಡೆಸಲಿದ್ದು, ಆ ಸಂದರ್ಭದಲ್ಲಿ ತೆರಿಗೆ ಪ್ರಮಾಣ ಇಳಿಕೆ ಮಾಡುವ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಔಷಧ ಹಾಗೂ ಆರೋಗ್ಯ ವಿಮೆ ಜಿಎಸ್‌ಟಿ ತಗ್ಗಿಸಲು ಒತ್ತಾಯ ಕೇಳಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next