Advertisement

ಡ್ರೋಣ್‌ನಿಂದ ಕೃಷಿ ಜಮೀನುಗಳಿಗೆ ಔಷಧಿ ಸಿಂಪಡಣೆ ಪ್ರಾತ್ಯಕ್ಷಿಕೆ

02:43 PM Oct 27, 2020 | sudhir |

ಅಮೀನಗಡ: ಸೂಳೇಭಾವಿ ಗ್ರಾಮದಲ್ಲಿ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆ ಹಾಗೂ ವರ್ಷ ಅಸೋಶಿಯೇಶನ್‌
ಸಹಯೋಗದಲ್ಲಿ ಡ್ರೋನ್‌ ಮೂಲಕ ಜಮೀನುಗಳಿಗೆ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆಯನ್ನು ರೈತರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕರಾದ ಧೂಳಪ್ಪ ತಮದಡ್ಡಿ, ಡ್ರೋಣ್‌ 10 ಲೀಟರ್‌ ಸಾಮರ್ಥ್ಯ ಹೊಂದಿದ್ದು, ಸಣ್ಣ ಕಣದಲ್ಲಿ ಸ್ಪ್ರೆà ಆಗುತ್ತದೆ.

Advertisement

1 ಎಕರೆ ಜಮೀನಿಗೆ ಸುಮಾರು 10 ಲೀಟರ್‌ ಮಿಶ್ರಣ ಸಾಕಾಗುತ್ತದೆ ನಿರ್ದಿಷ್ಟ ಮಾರ್ಗದಲ್ಲಿ ಮಾತ್ರ ಔಷಧಿ ಸಿಂಪಡಿಸಬಹುದಾಗಿದೆ ಇದರಿಂದ ಕೂಲಿ ಕಾರ್ಮಿಕರ ಸಮಸ್ಯೆಗೆ ಇದು ಪರಿಹಾರ ನೀಡಬಲ್ಲದು ಎಂದರು.

ಪ್ರಗತಿಪರ ಯುವರೈತ ರವಿ ಸಜ್ಜನ ಮಾತನಾಡಿ, ಪ್ರಸಕ್ತ ವರ್ಷ ಹೆಚ್ಚು ಮಳೆಯಾಗಿದ್ದು, ತೊಗರಿಯ ಬೆಳೆ ಹೆಚ್ಚು ಎತ್ತರ ಬೆಳೆದಿದೆ. ಆದರೆ ಇಂತಹ ಸಂದರ್ಭದಲ್ಲಿ ಜಮೀನುಗಳಿಗೆ ಔಷಧಿ ಸಿಂಪಡನೆ ಮಾಡಲು ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ.

ಇದನ್ನೂ ಓದಿ:ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ರೈತರು ಉತ್ತಮ ಬೆಳೆ ಪಡೆಯಲು ಸಾಧ್ಯ. ಡ್ರೋಣ್‌ ಮೂಲಕ ಔಷಧ ಸಿಂಪಡನೆ ಯಂತ್ರೋಪಕರಣಗಳನ್ನು ಬಳಸುವ ವಿಧಾನವನ್ನು ರೈತರಿಗೆ ತಿಳಿಸಲಾಯಿತು ಎಂದರು.

Advertisement

ಇದೇ ಸಂದರ್ಭದಲ್ಲಿ ರೈತರಿಗೆ ಡ್ರೋಣ್‌ ಮೂಲಕ ಜಮೀನಿಗೆ ಔಷಧ ಸಿಂಪಡಿಸುವ ವಿಧಾನದ ಮಾಹಿತಿ ಹಾಗೂ ಪ್ರಾತ್ಯಕ್ಷಿಕತೆ
ತಿಳಿಸಲಾಯಿತು. ಸ್ಥಳದಲ್ಲಿ ಹುನಗುಂದ ತಾಲೂಕ ಎಪಿಎಂಸಿ ಮಾಜಿ ಅಧ್ಯಕ್ಷ ಪಿಡ್ಡಪ್ಪ ಕುರಿ, ರೈತರಾದ ಮಹಾಂತೇಶ ಪಾಟೀಲ, ನಿಂಗನಗೌಡ ಪಾಟೀಲ, ಬಸವರಾಜ ಸಜ್ಜನ, ಶಂಕರಗೌಡ ಹಲಗತ್ತಿ, ಸಂಗಮೇಶ ಕುರಿ, ಯಮನೂರ ಘಂಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next