Advertisement
ಮಾವಿನ ಎಲೆ ವಿಟಮಿನ್ ಎ, ಬಿ, ಸಿ, ತಾಮ್ರದ ಅಂಶ, ಪೊಟ್ಯಾಷಿಯಂ ಹಾಗೂ ಮೆಗ್ನೇಷಿಯಂ ಪೋಷಕಾಂಶಗಳ ಜತೆಗೆ ಬಹಳಷ್ಟು ಔಷಧ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಇದರ ಕಷಾಯ ಸೇವನೆ ಕುರಿತಾಗಿ ಹೇಳಲಾಗಿದೆ. ಮಾವಿನ ಎಲೆಯನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಹಾಗೂ ಮಾನಸಿಕ ಒತ್ತಡದ ಸಮಸ್ಯೆಗಳು ಕಡಿಮೆಯಾಗುತ್ತದೆ.
- ಬಿಸಿ ನೀರಿಗೆ ಮಾವಿನ ಎಲೆಯನ್ನು ಹಾಕಿ ಸ್ನಾನ ಮಾಡುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. - ಮಾವಿನ ಎಲೆ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಶ್ವಾಸಕೋಶ ಸಂಬಂಧಿ ಸಮಸ್ಯೆ , ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ಸಹಕಾರಿ
Related Articles
Advertisement
- ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಗೂ ಇದು ಸಹಾಯಕ. ರಾತ್ರಿ ಬಿಸಿಯಾದ ನೀರಿಗೆ ಮಾವಿನ ಎಲೆಯನ್ನು ಹಾಕಿ ಮರುದಿನ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗುತ್ತದೆ.
- ಸುಟ್ಟ ಕಲೆಗಳು ಹೋಗದಿದ್ದಲ್ಲಿ ಮಾವಿನ ಎಲೆಯನ್ನು ಸುಟ್ಟು ಅದರ ಬೂದಿಯನ್ನು ಸುಟ್ಟ ಕಲೆಯ ಮೇಲೆ ಹಚ್ಚಿದರೆ ಕಲೆ ನಿವಾರಣೆಯಾಗುತ್ತದೆ.
- ರಕ್ತಭೇದಿ ಉಂಟಾದಾಗ ಮಾವಿನ ಎಲೆಯನ್ನು ಒಣಗಿಸಿ ಅದರ ಪುಡಿಯಿಂದ ಚಹಾ ತಯಾರಿಸಿ 3 ದಿನ ಸೇವಿಸಿದರೆ ಉಪಶಮನವಾಗುತ್ತದೆ.
- ಎಲೆಯ ರಸವನ್ನು ಮಂದ ಬಿಸಿಮಾಡಿ ಕಿವಿಗೆ ಹಾಕಿದರೆ ಕಿವಿ ನೋವು ನಿವಾರಣೆಯಾಗುತ್ತದೆ.
- ಮಾವಿನ ಎಲೆಯ ಚಹಾ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದ್ದು, ಜ್ವರ , ಅಸ್ತಮಾ, ಉಬ್ಬಿರುವ ರಕ್ತನಾಳ ಮತ್ತು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯ ಔಷಧವಾಗಿದೆ.
- ಮಾವಿನ ಎಲೆ ಪುಡಿಯನ್ನು ನಿತ್ಯ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
- ಧನ್ಯಶ್ರೀ ಬೋಳಿಯಾರ್