Advertisement

Ginger Tea: ಶುಂಠಿ ಚಹಾದ ವೈದ್ಯಕೀಯ ಗುಣಲಕ್ಷಣಗಳ ಬಗ್ಗೆ ಗೊತ್ತಾ…

04:15 PM Nov 21, 2023 | ಕಾವ್ಯಶ್ರೀ |

ಚಹಾ ಎಲ್ಲರಿಗೂ ಅಗತ್ಯವಾಗಿ ಬೇಕಾಗುವ ಪಾನೀಯವಾಗಿದೆ. ಅದರಲ್ಲೂ ಹೆಚ್ಚಿನವರು ಇಂದು ಶುಂಠಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಇದು ಚಹಾದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಶುಂಠಿಯಲ್ಲಿ ಹಲವಾರು ರೀತಿಯ ವೈದ್ಯಕೀಯ ಲಕ್ಷಣಗಳಿದ್ದು, ಶುಂಠಿಯ ನಿಯಮಿತ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಬಹುದು.

Advertisement

ಶುಂಠಿಯ ವೈದ್ಯಕೀಯ ಲಕ್ಷಣಗಳನ್ನು ತಿಳಿದು ಕೊಳ್ಳುವ ಮುನ್ನ ಶುಂಠಿ ಚಹಾ ಮಾಡುವ ಕುರಿತು ತಿಳಿದುಕೊಳ್ಳೊಣ.

ಶುಂಠಿ ಚಹಾ ಮಾಡುವ ವಿಧಾನ:

ವಿಧಾನ-1:

ಒಂದು ಲೋಟ ನೀರಿಗೆ ಶುಂಠಿ ಹಾಕಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿದ ಬಳಿಕ ಶೋಧಿಸಿ ಬೇಕೆಂದರೆ ಅದಕ್ಕೆ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿ ತದನಂತರದಲ್ಲಿ ಕುಡಿಯಿರಿ. (ಹಾಲು ಬೇಕಾದಲ್ಲಿ ಹಾಕಿ ಸೇವಿಸಬಹುದು)

Advertisement

ವಿಧಾನ-2:

ನೀರಿಗೆ ಚಹಾ ಪುಡಿ ಹಾಕಿ ಅದರೊಂದಿಗೆ ಶುಂಠಿ ಸೇರಿಸಿ ಅದಕ್ಕೆ ಹಾಲು ಮಿಶ್ರಣ ಮಾಡಿ ಸ್ವಲ್ಪ ಬೆಲ್ಲ ಹಾಕಿ ಕುಡಿಯುವುದು ಸಹ ಉತ್ತಮ.

ಶುಂಠಿ ಪ್ರತಿಯೊಬ್ಬರ ಮನೆಯಲ್ಲಿರುವ ಸಾಮಾನ್ಯ ಖಾರ ಪದಾರ್ಥ. ಪ್ರತಿದಿನ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಶುಂಠಿ ಚಹಾ ಸೇವಿಸಿದರೆ ಉತ್ತಮ. ಹೀಗೆ ಇನ್ನಷ್ಟು ಉಪಯೋಗಗಳು ಏನು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.

ರೋಗ ನಿರೋಧಕ ಶಕ್ತಿ ಹೆಚ್ಚಳ:

ಶುಂಠಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ತಲೆನೋವು, ಮುಟ್ಟಿನ ಸಮಯದಲ್ಲಿ ಉಂಟಾಗುವಂತಹ ನೋವು, ಗಂಟಲು ನೋವು, ಸ್ನಾಯು ಸೆಳೆತ ಮುಂತಾದ ಎಲ್ಲ ರೀತಿಯ ನೋವುಗಳಿಗೆ ಶುಂಠಿ ಪರಿಹಾರ ನೀಡುತ್ತದೆ.

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾದಷ್ಟು ರೋಗದ ವಿರುದ್ಧ ಹೋರಾಡಲು ನಮ್ಮ ದೇಹವು ಸ್ಪಂದಿಸುತ್ತದೆ. ರೋಗನಿರೋಧಕ ಶಕ್ತಿ ಇಲ್ಲವೆಂದರೆ ಸಣ್ಣಪುಟ್ಟ ಕಾಯಿಲೆಗಳು ದೊಡ್ಡದಾಗಿ ಪರಿಣಮಿಸುತ್ತದೆ. ಯಾವುದೇ ರೀತಿಯ ಉಸಿರಾಟದ ಸಮಸ್ಯೆಗಳಿದ್ದರೂ ಶುಂಠಿ ಹಾಕಿದ ನೀರನ್ನು ಸ್ಟೀಮ್ ತೆಗೆದುಕೊಳ್ಳುವುದರಿಂದ ಉತ್ತಮವಾದ ಆರೋಗ್ಯ ದೊರೆಯುತ್ತದೆ.

ಬೊಜ್ಜಿನ ಸಮಸ್ಯೆಗೆ :

ಬಿಸಿ ಬಿಸಿ ಶುಂಠಿ ಚಹಾ ಸೇವಿಸುವುದರಿಂದ ಹಸಿವಿನ ಪ್ರಮಾಣ ಕಡಿಮೆ ಮಾಡಿ ಸ್ವಲ್ಪ-ಸ್ವಲ್ಪವೇ ಆಹಾರ ತಿನ್ನುವಂತೆ ಪ್ರೇರೇಪಿಸುತ್ತದೆ. ಇದರಿಂದ ಶುಂಠಿ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಉ ಮಾಡುತ್ತದೆ.

ರಕ್ತದೊತ್ತಡ,  ಡಯಾಬಿಟಿಸ್ ಗೆ ಪರಿಹಾರ:

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಎನ್ನುವುದು ಒಂದು ಸಾಮಾನ್ಯ ಕಾಯಿಲೆಯಾಗಿದೆ. ನಿಯಮಿತವಾದ ಬಿಸಿ ಶುಂಠಿ ಚಹಾದಿಂದ ಈ ರೀತಿ ಆಗುವ ಏರುಪೇರುಗಳನ್ನು ತಡೆಯುತ್ತದೆ. ನಿಯಮಿತ ಶುಂಠಿ ಚಹಾ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

ಬಿಸಿಬಿಸಿ ಶುಂಠಿ ಚಹಾ ಸೇವನೆಯಿಂದ ರಕ್ತ ಹೆಪ್ಪುಗಟ್ಟುವಿಕೆ, ಹೃದ್ರೋಗ ,ಕಡಿಮೆ ರಕ್ತದೊತ್ತಡ, ರಕ್ತದ ಚಲನೆ ಮುಂತಾದವುಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ನಿಯಮಿತವಾಗಿ ಶುಂಠಿ ಚಹಾದ ಸೇವನೆ ಅಗತ್ಯ.

ಕ್ಯಾನ್ಸರ್ ತಡೆಗಟ್ಟಲು:

ಶುಂಠಿಯ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಗೆ ಕಾರಣವಾಗುವ ಜೀವಕೋಶಗಳನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ನಿಯಮಿತವಾಗಿ ಶುಂಠಿ ಚಹಾ ಸೇವಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು.

ಸುಸ್ತು, ವಾಕರಿಕೆ ನಿವಾರಣೆ:

ಸುಸ್ತು ಮತ್ತು ವಾಕರಿಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನಾರೋಗ್ಯ ತೊಂದರೆಗಳಿಗೆ ಶುಂಠಿ ಪರಿಹಾರ. ವಾಕರಿಕೆ, ಸುಸ್ತು ಮತ್ತು ಮಲಬದ್ಧತೆಯ ತೊಂದರೆ ಇದ್ದರೆ ಶುಂಠಿ ಚಹಾ ಸೇವಿಸಿ.

ಬ್ಯಾಕ್ಟೀರಿಯಾ ಮತ್ತು ವೈರಸ್:

ಶುಂಠಿಯು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ಜೊತೆ ಹೋರಾಡುವ ಅಂಶವನ್ನು ಹೊಂದಿದೆ. ನೆಗಡಿ, ಕೆಮ್ಮು, ಗಂಟಲಿನ ಸಮಸ್ಯೆ, ಹೃದ್ರೋಗ ಸಮಸ್ಯೆ , ಅಸಿಡಿಟಿ, ಮಧುಮೇಹ, ಕ್ಯಾನ್ಸರ್, ಶೀತ.. ಹೀಗೆ ಹೆಚ್ಚಿನ ಎಲ್ಲಾ ಸಮಸ್ಯೆಗಳಿಗೂ ಶುಂಠಿಯಲ್ಲಿ ಪರಿಹಾರವಿದೆ ಎನ್ನಬಹುದು.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next