Advertisement

ನುಗ್ಗೆ ಕಾಯಿ ಅಷ್ಟೇ ಅಲ್ಲ…ಸೊಪ್ಪಿನಲ್ಲಿಯೂ ಹೇರಳವಾದ ಆರೋಗ್ಯಕರ ಅಂಶಗಳಿವೆ…

12:27 PM Sep 06, 2022 | Team Udayavani |

ನುಗ್ಗೆಕಾಯಿ ಬಹುತೇಕ ಜನರು ಇಷ್ಟಪಡುವ ತರಕಾರಿಗಳಲ್ಲಿ ಒಂದು. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ನುಗ್ಗೆ ಕಾಯಿ ಅಷ್ಟೇ ಅಲ್ಲ ಅದರ ಸೊಪ್ಪಿನಲ್ಲಿಯೂ ಹೇರಳವಾದ ಆರೋಗ್ಯಕರ ಅಂಶಗಳಿವೆ. ಇದರಿಂದ ಅನೇಕ ಬಾಯಿ ಚಪ್ಪರಿಸಿ ತಿನ್ನುವಂತ ರುಚಿಕರ ಪದಾರ್ಥಗಳನ್ನು ತಯಾರಿಸಬಹುದಾಗಿದೆ. ನುಗ್ಗೆ ಸೊಪ್ಪು ಪ್ರಾಚೀನ ಕಾಲದ ಆಯರ್ವೇದ ದಿಂದ ಹಿಡಿದು ಇಂದಿನ ಸಂಶೋಧನೆಯವರೆಗೂ ಪ್ರಮುಖವಾಗಿದೆ. ಇದಕ್ಕೆ ಕಾರಣ ಇದ ರಲ್ಲಿರುವ ವಿವಿಧ ಔಷಧ ಗುಣ. ಇದರ ಉಪಯೋಗ ದಿಂದ ಮತ್ತು ಸೇವನೆ ಯಿಂದ ಅನೇಕ ಕಾಯಿಲೆ ಗಳನ್ನು ವಾಸಿ ಮಾಡಲು ಸಾಧ್ಯವಾಗುತ್ತದೆ.

Advertisement

ದೃಷ್ಟಿ ದೋಷ ಪರಿಹಾರ
ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ವೃದ್ದಾಪ್ಯ ಸಮಯದಲ್ಲಿ ದೃಷ್ಟಿ ದೋಷಗಳು ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದಿನ ಕಲುಷಿತ ಆಹಾರ ಪದ್ದತಿಯಿಂದ ಅಕಾಲಿಕ ದೃಷ್ಟಿದೋಷದ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ಪೋಷಕಾಂಶ ಮತ್ತು ಇತರೆ ಕಾರಣಗಳು ಇರಬಹುದು. ನುಗ್ಗೆ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ ಎ ಮತ್ತು ಬೀಟಾ ಕ್ಯಾರೋಟಿನ್‌ ಅಂಶ ಹೆಚ್ಚು ಇರುವ ಕಾರಣ ಇದು ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿ. ನುಗ್ಗೆ ಸೊಪ್ಪಿನಲ್ಲಿ ಲೂಟಿನ್‌ ಅಂಶವೂ ಹೆಚ್ಚಾಗಿದೆ. ಇದು ಕಣ್ಣುಗಳಿಗೆ ಒತ್ತಡ ಮತ್ತು ಕುರುಡುತನಕ್ಕೆ ಕಾರಣವಾಗುವ ಗ್ಲೂಕೋಮ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ತಡೆಯುತ್ತದೆ.

ಸಕ್ಕರೆ ಕಾಯಿಲೆ ದೂರ
ಇತ್ತೀಚಿನ ದಿನಗಳಲ್ಲಿ ಒತ್ತಡ, ದೈಹಿಕ ಶ್ರಮದ ಕೊರತೆಯಿಂದ ಸಕ್ಕರೆ ಕಾಯಿಲೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಸಂಶೋಧನೆಯೊಂದರ ಪ್ರಕಾರ ನುಗ್ಗೆ ಸೊಪ್ಪಿನಲ್ಲಿ ಆ್ಯಂಟಿ ಡಯಾಬಿಟಿಕ್‌ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್‌ ಅಂಶಗಳು ಹೆಚ್ಚಿರುವ ಕಾರಣ ಇದು ಮಧುಮೇಹ ಕಾಯಿಲೆ ಇರುವವರು ಹೆಚ್ಚಾಗಿ ಸೇವಿಸುವದರಿಂದ ಕಾಯಿಲೆಯಿಂದ ಬಚಾವಾಗಲು ಸಹಕಾರಿ. ಅಲ್ಲದೇ ಇದರಲ್ಲಿ “ಡಿ’ ವಿಟಮಿನ್‌ ಹೆಚ್ಚಾಗಿದ್ದು ಇದು ದೇಹದಲ್ಲಿ ಇನ್ಸುಲಿನ್‌ ಮಟ್ಟವನ್ನು ಹೆಚ್ಚು ಮಾಡುತ್ತದೆ.

ಅಧಿಕ ರಕ್ತದೊತ್ತಡ ನಿವಾರಣೆ
ಇತ್ತಿಚಿನ ದಿನಗಳಲ್ಲಿ ಮನುಕುಲವನ್ನು ಹೆಚ್ಚಾಗಿ ಕಾಡುತ್ತಿರುವ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದಾಗಿದೆ. ಇದಕ್ಕೆ ನುಗ್ಗೆ ಸೊಪ್ಪು ಎಲ್ಲ ರೀಯಿಂದಲೂ ಉಪಯುಕ್ತವಾಗಿದೆ. ಏಕೆಂದರೆ ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಇದು ಅಧೀಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next