Advertisement

“ಔಷಧೀಯ ಗಿಡಮೂಲಿಕೆ ಅರಿವು ಅಗತ್ಯ’

12:55 PM Aug 05, 2017 | |

ಹುಬ್ಬಳ್ಳಿ: ಸಮಾಜಕ್ಕೆ ಔಷಧಿಯ ಗುಣವುಳ್ಳ ಗಿಡಮೂಲಿಕೆಗಳ ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ಯೋಗಾಚಾರ್ಯ ಭವರಲಾಲ್‌ ಆರ್ಯ ಹೇಳಿದರು. ಇಲ್ಲಿಯ ಕೇಶ್ವಾಪುರದ ಪತಂಜಲಿ ಯೋಗ ಸಮಿತಿ ಕಾರ್ಯಾಲಯದಲ್ಲಿ ನಡೆದ ಗಿಡಮೂಲಿಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇಂದು ವಿದೇಶಿಯ ಅಲೋಪತಿ ವೈದ್ಯ ಪದ್ಧತಿಗೆ ಜನರು ಮಾರು ಹೋಗುತ್ತಿದ್ದಾರೆ. ಆದ್ದರಿಂದ ಹೆಚ್ಚು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳತ್ತವೆ. ಆದರೆ ಭಾರತದ ಆಯುರ್ವೇದ ಕಡಿಗಣಿಸುವ ಬದಲು ಉತ್ತೇಜಿಸಬೇಕು ಎಂದರು. ಸಂಸ್ಥೆಯ ಆವರಣದಲ್ಲಿ ಗಿಡಮೂಲಿಕೆ ಗಿಡಗಳನ್ನು ನೆಡಲಾಯಿತು.

ಹಾಗೆಯೇ ಇತರರಿಗೂ ಗಿಡಮೂಲಿಕೆ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪತಂಜಲಿ ಜಿಲ್ಲಾ ಪ್ರಭಾರಿ ಸಂಗಮೇಶ ನಿಂಬರಗಿ, ಯೋಗ ಶಿಕ್ಷಕ ರಮೇಶ, ವಾಮನ ಶಾನಭಾಗ, ಬಸವರಾಜ ಹರವಿ, ವಾಲೀಕಾರ, ಸುಧಾ, ಅಂಬರಾಯ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next