Advertisement
ಬಹಳ ಹಿಂದಿನಿಂದಲೂ ಆರೋಗ್ಯ ಕ್ಷೇತ್ರದತ್ತ ಸರಕಾರಗಳು ಹೊಂದಿದ ದಿವ್ಯ ನಿರ್ಲಕ್ಷ್ಯ ಇಂದು ಆ ರಾಷ್ಟ್ರಗಳಿಗೆ ತಲೆನೋವಾಗಿದೆ. ಆರೋಗ್ಯ ವ್ಯವಸ್ಥೆಯನ್ನು ಉನ್ನತ ದರ್ಜೆಗೆ ಏರಿಸುವ ಬದಲು ತಾವೇ ಹೋಗಿ ಮತ್ತೂಂದು ದೇಶದ ಆಸ್ಪತ್ರೆಯ ಕದ ಬಡಿಯಬೇಕಾಗಿ ಬಂದಿರುವುದು ವಿಪರ್ಯಾಸವಾಗಿದ್ದರೂ ವಾಸ್ತವ.
ಇದಕ್ಕೆ ಉದಾಹರಣೆಯಾಗಿ ಜಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ಕತೆಯನ್ನು ತೆಗೆದುಕೊಳ್ಳಬಹುದು. ಅವರು ಪದೇಪದೆ ಬರೀ ಚಿಕಿತ್ಸೆ ಪಡೆಯುವುದಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು. ನೈಜೀರಿಯಾದ ಅಧ್ಯಕ್ಷ ಮುಹಮ್ಮದ್ ಬುಹಾರಿ 2015ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಇಂಗ್ಲೆಂಡಿಗೆ ವರ್ಷಕ್ಕೆ ಕನಿಷ್ಠ ನಾಲ್ಕು ಸಲ ವೈದ್ಯಕೀಯ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಪಾಠ ಕಲಿಸಿದ ಕೋವಿಡ್
ಆದರೆ ಈಗ ಕೋವಿಡ್ ವೈರಸ್ ಬಂದ ಬಳಿಕ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ರದ್ದಾಗಿವೆ. ಎಲ್ಲೆಡೆ ಲಾಕ್‌ಡೌನ್ ಆಗಿರುವುದರಿಂದ ಕಳಪೆ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳು ಈಗ ತಪ್ಪಿನಿಂದ ಪಾಠ ಕಲಿತು ಎಚ್ಚೆತ್ತುಕೊಂಡಿವೆ. ಈ ದೇಶಗಳ ನಾಯಕರು ತಮ್ಮ ದೇಶದ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದು ಆಗಿರುವ ಒಂದು ಪ್ರಯೋಜನ.
Related Articles
ಕೋವಿಡ್ ವೈರಸ್ ಸಾಂಕ್ರಾಮಿಕವು ಆಫ್ರಿಕ ದೇಶದ ಸುಧಾರಿತ ಆರೋಗ್ಯ ಸೌಲಭ್ಯಗಳ ಮುಂದೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟಿದೆ. ಕೋವಿಡ್ -19 ಪ್ರಕರಣಗಳನ್ನು ಎದುರಿಸಲು ಬೇಕಾಗಿರುವ ವೆಂಟಿಲೇಟರ್‌ಗಳು ಇನ್ನೂ ಆಫ್ರಿಕನ್ ರಾಷ್ಟ್ರಗಳಿಗೆ ದುಬಾರಿಯಾಗಿಯೇ ಉಳಿದಿವೆ. ಹೆಚ್ಚಿನ ರಾಷ್ಟ್ರಗಳಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಎರಡು ಅಂಕಿಯನ್ನು ಮೀರಿಲ್ಲ. ಕೆಲವು ರಾಷ್ಟ್ರಗಳಲ್ಲಿ ವೆಂಟಿಲೇಟರ್‌ಗಳೇ ಇಲ್ಲ.
Advertisement
ಇಲ್ಲಗಳೇ ಎಲ್ಲ ಮಧ್ಯ ಆಫ್ರಿಕದ ಗಣರಾಜ್ಯವೊಂದು ತನ್ನ 50 ಲಕ್ಷ ಜನರಿಗೆ ಕೇವಲ ಮೂರು ವೆಂಟಿಲೇಟರ್‌ಗಳನ್ನು ಹೊಂದಿದೆ. ಜಿಂಬಾಬ್ವೆಯಲ್ಲೂ ಪರಿಸ್ಥಿತಿ ಅಷ್ಟೇ ಭೀಕರವಾಗಿದೆ. ಸರಕಾರಿ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರಿಗೆ ರೋಗಿಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಕನಿಷ್ಠ ಬ್ಯಾಂಡೇಜ್ ಮತ್ತು ಕೈಗವಸುಗಳಂತಹ ಮೂಲ ಸೌಕರ್ಯಗಳ ಕೊರತೆಯಿದೆ. ಒಟ್ಟಾರೆಯಾಗಿ ಆಫ್ರಿಕ ದೇಶಗಳ ವೈದ್ಯಕೀಯ ವ್ಯವಸ್ಥೆಯಲ್ಲಿ ಇರುವುದಕ್ಕಿಂತ ಇಲ್ಲಗಳ ಪಟ್ಟಿಯೇ ದೊಡ್ಡದಿದೆ. ಇಟಲಿಗೆ ಸಾಧ್ಯವಾಗದ್ದು ಆಫ್ರಿಕಕ್ಕೆ ಸಾಧ್ಯವಾದೀತೇ?
ಇಟಲಿಯಲ್ಲಿ ಜಗತ್ತಿನ ಸೂಪರ್ ಹೆಲ್ತ್ ಕೇರ್ ಸಿಸ್ಟಮ್ ಇದ್ದರೂ ಕೋವಿಡ್ ದೊಡ್ಡ ಸಂಖ್ಯೆಯ ಸಾವುಗಳಿಗೆ ಕಾರಣವಾಗಿತ್ತು. ಆಫ್ರಿಕದ ಅನೇಕ ದೇಶಗಳಲ್ಲಿ ಸರಕಾರದ ಖರ್ಚಿನಲ್ಲಿ ಆರೋಗ್ಯ ಸೇವೆ ದೊರೆಯುವುದಿಲ್ಲ. ಇದು ಆಫ್ರಿಕದ ಸರಕಾರಗಳಿಗೆ ಆರೋಗ್ಯ ರಕ್ಷಣೆ ಆದ್ಯತೆಯಾಗಿಲ್ಲ ಎಂಬುನ್ನು ತೋರಿಸುತ್ತದೆ. ಈಗ ಕೋವಿಡ್ ವೈರಸ್ ಸಾಂಕ್ರಾಮಿಕವು ಆಫ್ರಿಕದ ನಾಯಕರಿಗೆ ಜ್ಞಾನೋದಯವಾಗುವಂತೆ ಮಾಡಿದೆ. ತಾವು ಈ ಹಿಂದೆಯೇ ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಹೂಡಿಕೆ ಮಾಡಬೇಕಾಗಿತ್ತು ಎಂಬುದೀಗ ಅವರಿಗೆ ಮನವರಿಕೆಯಾಗಿದೆ. ಬಜೆಟ್‌ನಲ್ಲಿಲ್ಲ ಅನುದಾನ
ವಿದೇಶಿ ವೈದ್ಯಕೀಯ ಪ್ರವಾಸಗಳಿಗೆ ಖರ್ಚು ಮಾಡಿದ ಹಣವನ್ನು ಆಸ್ಪತ್ರೆಗಳನ್ನು ನಿರ್ಮಿಸಲು, ವೆಂಟಿಲೇಟರ್‌ಗಳಂತಹ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಲು ಬಳಸಿದ್ದರೆ ಪರಿಸ್ಥಿತಿ ಇಷ್ಟು ಭೀಕರವಾಗುತ್ತಿರಲಿಲ್ಲ. ಸೌಲಭ್ಯಗಳ ಕೊರತೆಯಿಂದಾಗಿಯೇ ಉಗಾಂಡದ ಕೆಲವು ಸಾರ್ವಜನಿಕ ಆಸ್ಪತ್ರೆಗಳು ಸಾವಿನ ಕೂಪಗಳಾಗಿ ಮಾರ್ಪಟ್ಟಿವೆ. 2019 ಮತ್ತು 2020ರ ನಡುವೆ ಉಗಾಂಡ ತನ್ನ ಬಜೆಟ್‌ನಲ್ಲಿ ಬರೀ ಶೇ. 8.9ರಷ್ಟನ್ನು ಆರೋಗ್ಯಕ್ಕಾಗಿ ಖರ್ಚು ಮಾಡಿದೆ. ಉಗಾಂಡದ ನಾಯಕರು ನೆಗಡಿ,ಕೆಮ್ಮು, ಜ್ವರದಂಥ ಸಣ್ಣ ಕಾಯಿಲೆಗಳ ಚಕಿತ್ಸೆಗೂ ವಿದೇಶಗಳಿಗೆ ಹಾರಿ ಹೋಗುತ್ತಾರೆ! ಕಡತದಲ್ಲೇ ಉಳಿಯಿತು ನಿರ್ಣಯ
2001ರಲ್ಲಿ ಆಫ್ರಿಕದ 52 ರಾಷ್ಟ್ರಗಳ ಮುಖ್ಯಸ್ಥರು ನೈಜೀರಿಯಾದ ರಾಜಧಾನಿ ಅಬುಜಾದಲ್ಲಿ ಸಭೆ ಸೇರಿ ತಮ್ಮ ರಾಷ್ಟ್ರಗಳ ಬೆಳವಣಿಗೆ ಕುರಿತು ಚರ್ಚಿಸಿದ್ದರು. ವಾರ್ಷಿಕ ಬಜೆಟ್‌ನ ಶೇ.15ರಷ್ಟನ್ನು ಆರೋಗ್ಯ ಕ್ಷೇತ್ರಕ್ಕಾಗಿ ಖರ್ಚು ಮಾಡಲು ನಿರ್ಧರಿಸಿದ್ದರು. ಆದರೆ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಈ ಗುರಿ ಪೂರೈಸಿವೆ. ಟಾಂಜಾ ನಿಯ, ರವಾಂಡ, ಬೋತ್ಸಾನ, ಜಾಂಬಿಯ ಈ ಪೈಕಿ ಕೆಲವು. ರವಾಂಡ ಆರೋಗ್ಯ ವೆಚ್ಚವನ್ನು 10 ವರ್ಷಗಳ ಅವಧಿಯಲ್ಲಿ ದ್ವಿಗುಣಗೊಳಿಸಿದೆ. ಅಬುಜಾ ಸಮಾವೇಶದಲ್ಲಿ ಹೊರಡಿಸಲಾದ ಘೋಷಣೆಗೆ ಸಹಿ ಹಾಕಿದಾಗಿನಿಂದ ನೈಜೀರಿಯ ಬಜೆಟ್‌ನ ಶೇ. 6ಕ್ಕಿಂತಲೂ ಕಡಿಮೆ ಮೊತ್ತವನ್ನು ಆರೋಗ್ಯಕ್ಕೆ ಮೀಸಲಿಟ್ಟಿದೆ. ಈ ಕ್ಷೇತ್ರಕ್ಕೆ ಬಳಕೆಯಾಗದೇ ಇದ್ದ ಹಣವನ್ನು ಸಂಬಳಕ್ಕಾಗಿ ಖರ್ಚು ಮಾಡಿದೆ. ಇದೀಗ ಈ ದೇಶಗಳು ಬುದ್ಧಿ ಕಲಿತುಕೊಂಡಿವೆ. ಆದರೆ ಅದಕ್ಕಾಗಿ ಲಕ್ಷಾಂತರ ಜನರ ಪ್ರಾಣ ಬಲಿಯಾಗಬೇಕಾಯಿತು.ಒಂದರ್ಥದಲ್ಲಿ ಕೋವಿಡ್ ಜಗತ್ತಿನ ಆರೋಗ್ಯ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಕಾರಣವಾಗಿದೆ.