Advertisement

ಸೋಂಕು ಪೀಡಿತರ ಸೇವೆಗೆ ವೈದ್ಯ ವಿದ್ಯಾರ್ಥಿಗಳು!

12:08 AM Apr 30, 2021 | Team Udayavani |

ಬೆಂಗಳೂರು: ಕೋವಿಡ್ ಪೀಡಿತರ ಚಿಕಿತ್ಸೆ, ಆರೈಕೆ ಮತ್ತು ಆಪ್ತ ಸಮಾಲೋಚನೆಗಾಗಿ 12 ಸಾವಿರ ವೈದ್ಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಯೋಜನೆ ಸಿದ್ಧಪಡಿಸಿದೆ.

Advertisement

ವೈದ್ಯಕೀಯ, ದಂತ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು ಆಯುಷ್‌ ಇಲಾಖೆಯ ಅಧೀನದಲ್ಲಿ ಬರುವ ಆಯುರ್ವೇದ ವಿದ್ಯಾರ್ಥಿಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ವಿ.ವಿ. ಮುಂದಾಗಿದೆ.

ಬಹುತೇಕರು ಹೋಂ ಐಸೋಲೇಶನ್‌, ಕ್ವಾರಂಟೈನ್‌ ಆಗುತ್ತಿದ್ದಾರೆ. ಇಂಥವರಲ್ಲಿ ಉದ್ಭವಿಸಬಹುದಾದ ಸಂದೇಹಗಳಿಗೆ ಪರಿಹಾರ ನೀಡಲು ಮತ್ತು ಕೋವಿಡ್‌ ಬಗ್ಗೆ ಅಗತ್ಯ ಸಲಹೆ, ಮಾರ್ಗದರ್ಶನ, ಆಪ್ತ ಸಮಾಲೋಚನೆ ನೀಡಲು ವೈದ್ಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯ ಆರಂಭಿಸಿದ್ದೇವೆ ಎಂದು ವಿ.ವಿ. ಕುಲಪತಿ ಡಾ| ಎಸ್‌. ಸಚ್ಚಿದಾನಂದ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಗೂ ತರಬೇತಿ :

ವಾರಕ್ಕೆ 2-3 ದಿನ ಆನ್‌ಲೈನ್‌ ಮೂಲಕ ವೈದ್ಯರಿಗೆ, ವೈದ್ಯಕೀಯ, ಅರೆವೈದ್ಯಕೀಯ ಸಿಬಂದಿ ಸಹಿತ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ, ಪೊಲೀಸರಿಗೆ ತರಬೇತಿ ನೀಡಲು ರೀತಿಯ ಸಿದ್ಧತೆ ಮಾಡಿದ್ದೇವೆ. ಹಾಗೆಯೇ ಸಾರ್ವಜನಿಕರಿಗೂ ತಜ್ಞರ ಮೂಲಕ ಆನ್‌ಲೈನ್‌ ತರಬೇತಿ ನೀಡಲು ತಯಾರಿ ನಡೆಸುತ್ತಿದ್ದೇವೆ. ಇವರು ಕೂಡ ಸೋಂಕುಪೀಡಿತರ ಆರೈಕೆಯಲ್ಲಿ ಸೇರಿಕೊಳ್ಳಬಹುದು ಎಂದು ವಿ.ವಿ.ಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಶೇ. 80ರಿಂದ ಶೇ. 85ರಷ್ಟು ಮಂದಿಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಕಷ್ಟ. ಹೋಂ ಐಸೋಲೇಶನ್‌, ಕ್ವಾರಂಟೈನ್‌ ಅತೀ ಮುಖ್ಯ. ಇಂಥ ಸಂದರ್ಭದಲ್ಲಿ ಔಷಧ ಮತ್ತು ಆರೈಕೆಯ ಬಗ್ಗೆ ಅಗತ್ಯ ಸಲಹೆ, ಮಾರ್ಗ ದರ್ಶನ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವೈದ್ಯ ವಿದ್ಯಾರ್ಥಿ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರಕಾರದೊಂದಿಗೂ ಮಾತುಕತೆ ನಡೆಸಿದ್ದೇವೆ. ಡಾ| ಎಸ್‌. ಸಚ್ಚಿದಾನಂದ, ಕುಲಪತಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next