Advertisement

ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ; ವಿಭಾಗದ ಮುಖ್ಯಸ್ಥೆ ಅಮಾನತು

01:26 PM Jul 15, 2019 | Suhan S |

ಹುಬ್ಬಳ್ಳಿ: ಹರಿಯಾಣದ ರೋಹಟಕ್‌ನ ವೈದ್ಯಕೀಯ ವಿಜ್ಞಾನ ಕಾಲೇಜ್‌ನ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ವೈದ್ಯಕೀಯ ವಿದ್ಯಾರ್ಥಿ ಡಾ| ಓಂಕಾರ ಬರಿದಾಬಾದ್‌ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ| ಗೀತಾ ಘಾತವಾಲಾ ಅವರನ್ನು ಕಾಲೇಜ್‌ನ ಆಡಳಿತ ಮಂಡಳಿ ವಜಾ ಮಾಡಿದೆ ಎಂದು ತಿಳಿದು ಬಂದಿದೆ.

Advertisement

ರೋಹಟಕ್‌ನ ಪಿಜಿಐ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಿಡಿಯಾಟ್ರಿಕ್‌ನಲ್ಲಿ ಎಂಡಿ ಮಾಡುತ್ತಿದ್ದ ಇಲ್ಲಿನ ಗದಗ ರಸ್ತೆ ಚೇತನಾ ಕಾಲೋನಿಯ ಡಾ| ಓಂಕಾರ ಜೂ.13ರಂದು ರಾತ್ರಿ ವಾಸವಿದ್ದ ಹಾಸ್ಟೇಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ವಿಭಾಗದ ಮುಖ್ಯಸ್ಥೆ ಗೀತಾ ಅವರ ಕಿರುಕುಳವೇ ಕಾರಣವೆಂದು ಕಾಲೇಜ್‌ನ ವಿದ್ಯಾರ್ಥಿಗಳು ಆರೋಪಿಸಿ, ಕಾಲೇಜ್‌ನ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಮಾಡಿದ್ದರು. ಆತ್ಮಹತ್ಯೆ ಕುರಿತು ರೋಹಟಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಡಾ| ಗೀತಾ ತಲೆಮರೆಸಿಕೊಂಡಿದ್ದರು. ಜೂ. 17ರಂದು ಕಾಲೇಜ್‌ನವರು ಅಮಾನತು ಮಾಡಿದ್ದಾರೆಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದ್ದಾರೆಂದು ಮೃತ ಡಾ| ಓಂಕಾರ ತಂದೆ, ರೈಲ್ವೆ ಉದ್ಯೋಗಿ ಮಾಣಿಕ ಬರಿದಾಬಾದ್‌ ‘ಉದಯವಾಣಿ’ಗೆ ತಿಳಿಸಿದರು.

ಡಾ| ಓಂಕಾರ ಇದ್ದ ರೂಮ್‌ನಿಂದ ಲಗೇಜ್‌ ಇನ್ನಿತರೆ ಸಾಮಗ್ರಿ ತರಬೇಕೆಂದರೆ ಆ ರೂಮ್‌ ಸೀಜ್‌ ಮಾಡಿದ್ದಾರೆಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕಾಲೇಜ್‌ನವರಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಓಂಕಾರನ ಸಹಪಾಠಿಗಳು ಬರಲು ತಿಳಿಸಿದಾಗ ರೋಹಟಕ್‌ಗೆ ಹೋಗಿ ಆತನ ಸಾಮಗ್ರಿಗಳನ್ನೆಲ್ಲ ತರಲಾಗುವುದು ಎಂದು ಮಾಣಿಕ ತಿಳಿಸಿದರು.

ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ಕೋರಿ ಮೃತ ಮಾಣಿಕ ಬರಿದಾಬಾದ್‌ ಅವರು ಜೂ. 24ರಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಕೇಂದ್ರದ ಕೆಲವು ಸಚಿವರಿಗೆ ಹಾಗೂ ಕಾಲೇಜ್‌ನ ನಿರ್ದೇಶಕರಿಗೆ, ಹರಿಯಾಣದ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

•ಸಂಚಾರ ಉಲ್ಲಂಘನೆ: 1.98ಲಕ್ಷ ರೂ. ದಂಡ ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಶನಿವಾರ 1326 ಪ್ರಕರಣಗಳನ್ನು ದಾಖಲಿಸಿಕೊಂಡು 1,98,950 ರೂ. ದಂಡ ವಸೂಲಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next