Advertisement

ಆರೋಗ್ಯ ಯೋಧರು: ಇಲ್ಲಿ ಆಸ್ಪತ್ರೆಯಲ್ಲೇ ತಯಾರಾಗುತ್ತೇ ಬಿಸಿ ಬಿಸಿ ಆಹಾರ

11:10 AM Apr 18, 2020 | Hari Prasad |

ಕೋವಿಡ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ವಲಯದ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಅವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕರ್ತವ್ಯನಿಷ್ಠೆಯಲ್ಲಿ ತೊಡಗಿರುವುದು ಎಲ್ಲರಿಗೂ ಗೊತ್ತೇ ಇದೆ.

Advertisement

ಇದರ ನಡುವೆಯೇ, ಕೇರಳದಲ್ಲಿ ವೈದ್ಯಕೀಯ ಸಿಬಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇಲ್ಲಿನ ಪಟ್ಟಣಂತಿಟ್ಟ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬಂದಿಯೇ ಸ್ವತಃ ಒಂದು ಅಡುಗೆ ಮನೆಯನ್ನು ನಿರ್ಮಿಸಿಕೊಂಡು, ಆಸ್ಪತ್ರೆಯಲ್ಲಿನ ರೋಗಿಗಳು, ನರ್ಸ್‌ ಗಳು, ವೈದ್ಯರು ಹಾಗೂ ಇತರೆ ನೌಕರರಿಗೆ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದಾರೆ.

ರೋಗಿಗಳು ಮತ್ತು ವೈದ್ಯಕೀಯ ತಂಡಕ್ಕೆ ತಾವು ಮನೆಯಲ್ಲೇ ಇದ್ದೇವೆ ಎಂಬ ಭಾವನೆ ಮೂಡಿಸುವಂತೆ ಮಾಡುವುದೇ ನಮ್ಮ ಉದ್ದೇಶ ಎಂದೂ ಅವರು ಹೇಳುತ್ತಾರೆ.

ಆಸ್ಪತ್ರೆಯ ಡಯಟೀಷಿಯನ್‌ ಸಲಹೆಯ ಮೇರೆಗೆ ಬೆಳಗ್ಗಿನ ಉಪಾಹಾರ, ಸಂಜೆಯ ತಿಂಡಿ ಹಾಗೂ ರಾತ್ರಿಯ ಊಟವನ್ನು ಇಲ್ಲೇ ತಯಾರಿಸಲಾಗುತ್ತದೆ ಎನ್ನುತ್ತಾರೆ ಆಸ್ಪತ್ರೆಯ ಮೇಲ್ವಿಚಾರಕ ಡಾ. ಸಜನ್‌ ಮ್ಯಾಥ್ಯೂ.

Advertisement

Udayavani is now on Telegram. Click here to join our channel and stay updated with the latest news.

Next