ಬೆಳ್ತಂಗಡಿ: ಉಜಿರೆ ಮುಖ್ಯಪೇಟೆಯ ಚಾರ್ಮಾಡಿ ರಸ್ತೆಯಲ್ಲಿರುವ ಮೆಡಿಕಲ್ ಶಾಪ್ ಹಾಗೂ ಹಾರ್ಡ್‌ವೇರ್ ಅಂಗಡಿಯ ಮೇಲಂತಸ್ತು ಒಡೆದು, ಅಂಗಡಿಗಳನ್ನು ಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಜ.16ರ ತಡರಾತ್ರಿ ನಡೆದಿದೆ.
ಅಂಗಡಿ ಪ್ರವೇಶಿಸಿದ ಕಳ್ಳನ ಚಟುವಟಿಕೆಗಳು ಸಿ.ಸಿ.ಕ್ಯಾಮೆರಾದಲ್ಲಿ ದಾಖಲಾಗಿವೆ.ಮುಖಕ್ಕೆ ಸ್ಕಾರ್ಪ್ ಹಾಕಿ ಮೆಡಿಕಲ್ ಒಳಗಡೆ ಜಾಲಾಡಿದ್ದು ಹೆಚ್ಚಿನ ನಗದು ಸಿಗದೆ ಇದ್ದಾಗ ದಿನಬಳಕೆಯ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ಮೆಡಿಕಲ್ ಅಂಗಡಿಯ ಲ್ಯಾಪ್ ಟಾಪನ್ನು ಕಟ್ಟಡದ ಮೇಲ್ಭಾಗಕ್ಕೆ ಕೊಂಡೊಯ್ದು ಪುಡಿಗಯ್ಯಲಾಗಿದೆ. ಸ್ವಯ್ಪ್ ಮೆಷೀನ್‌ನ್ನು ಬಕೆಟ್‌ಗೆ ಹಾಕಿರುವುದು ಕಂಡುಬಂದಿದೆ. ಹಾರ್ಡ್‌ವೇರ್ ಅಂಗಡಿ ಕೇಬಲ್‌ಗಳಿಗೆ ಹಾನಿ ಮಾಡಿದ್ದು ಚಿಲ್ಲರೆ ನಗದು ಕಳ್ಳತನವಾಗಿದೆ. ಕಳ್ಳನ ಕೃತ್ಯದಿಂದ ಸುಮಾರು ಒಂದು ಲಕ್ಷ ರೂ.ನಷ್ಟು ಸೊತ್ತುಗಳಿಗೆ ಹಾನಿಯಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Related Articles
ಇತ್ತೀಚೆಗೆ ಬೆಳ್ತಂಗಡಿ ಪೇಟೆ ಸಹಿತ ಉಜಿರೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ. ನಗರದಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ ಇದ್ದರೂ ಪೊಲೀಸರ ಕಣ್ತಪ್ಪಿಸಿ ಕೃತ್ಯ ನಡೆಯುತ್ತಿದೆ. ಈ ಕುರಿತು ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸುವ ಅವಶ್ಯಕತೆಯಿದೆ.