Advertisement

ವೈದ್ಯಕೀಯ ಸೀಟು ಪ್ರಕಟ

03:30 AM Jul 22, 2017 | Team Udayavani |

ಬೆಂಗಳೂರು: ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟಿನ ವಿವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಸಂಬಂಧಪಟ್ಟ ಅಭ್ಯರ್ಥಿಗಳು ಜು. 23ರ ತನಕ ಆಪ್ಶನ್‌ ಎಂಟ್ರಿ ಮಾಡಬಹುದು. ಸರಕಾರಿ ಕೋಟಾದ ವೈದ್ಯಕೀಯ ಕೋರ್ಸ್‌ಗೆ 2,687, ದಂತ ವೈದ್ಯಕೀಯ ಕೋರ್ಸ್‌ಗೆ 689 ಸೀಟು ಲಭ್ಯವಿದೆ. ಹೈದರಾಬಾದ್‌ ಕರ್ನಾಟಕ ಕೋಟಾದಡಿ ವೈದ್ಯಕೀಯ ಕೋರ್ಸ್‌ಗೆ 784, ದಂತ ವೈದ್ಯಕೀಯಕ್ಕೆ 179, ಖಾಸಗಿ ಕೋಟಾದಡಿ ವೈದ್ಯಕೀಯ ಕೋರ್ಸ್‌ಗೆ 2,022, ದಂತ ವೈದ್ಯಕೀಯ ಕೋರ್ಸ್‌ಗೆ 1,271, ವಿಶೇಷ ವಿಭಾಗದಲ್ಲಿ ವೈದ್ಯಕೀಯ ಕೋರ್ಸ್‌ಗೆ 159 ಹಾಗೂ ದಂತ ವೈದ್ಯಕೀಯ ಕೋರ್ಸ್‌ಗೆ 45, ಎನ್‌ಆರ್‌ಐ ಕೋಟಾದಡಿ ವೈದ್ಯಕೀಯ ಕೋರ್ಸ್‌ಗೆ 577, ದಂತ ವೈದ್ಯಕೀಯ ಕೋರ್ಸ್‌ಗೆ 325 ಸೀಟು ಲಭ್ಯವಿದೆ.

Advertisement

2017ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಆಯ್ಕೆ ದಾಖಲಿಸಲು ಜು. 23ರ ಸಂಜೆ 5ರ ತನಕ ಅವಕಾಶ ಕಲ್ಪಿಸಿ, ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಲಭ್ಯವಿರುವ ಸೀಟು, ಕಾಲೇಜಿನ ವಿವರ, ಆಯ್ಕೆ ಪ್ರಕ್ರಿಯೆ ಹಾಗೂ ಪರಿಷ್ಕೃತ ವೇಳಾಪಟ್ಟಿಯ ಮಾಹಿತಿ ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.inನಲ್ಲಿ ಲಭ್ಯವಿದೆ. ಜು. 24ರ ಅಪರಾಹ್ನ 4ಕ್ಕೆ ಅಣಕು ಸೀಟು ಹಂಚಿಕೆ, ಜು. 25ರ ಸಂಜೆ 5 ಗಂಟೆಯ ತನಕ ಆಪ್ಶನ್‌ ಎಂಟ್ರಿ ಬದಲಾಯಿಸಲು ಅವಕಾಶ ಇರುತ್ತದೆ. ಜು. 26ರ ಅಪರಾಹ್ನ 4ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಆಯ್ಕೆಯನ್ನು ಖಚಿತಪಡಿಸಿಕೊಂಡು, ಶುಲ್ಕ ಪಾವತಿ ಮತ್ತು ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಆ. 4ರ ತನಕ ಅವಕಾಶವಿದ್ದು, ಆ. 5ರ ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜಿಗೆ ಹಾಜರಾಗಬೇಕು ಎಂದು ಪ್ರಾಧಿಕಾರ ವಿದ್ಯಾರ್ಥಿಗಳಿಗೆ ತಿಳಿಸಿದೆ.

ಶುಲ್ಕ ವಿವರ: ಸರಕಾರಿ ಕಾಲೇಜಿನಲ್ಲಿ 16 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಬೆಂಗಳೂರು ಮತ್ತು ಕಲಬುರಗಿ ಇಎಸ್‌ಐ ವೈದ್ಯಕೀಯ ಕಾಲೇಜಿನ ಸೀಟುಗಳಿಗೆ 1 ಲಕ್ಷ, ಖಾಸಗಿ ಕಾಲೇಜಿನಲ್ಲಿ ಸರಕಾರಿ ಕೋಟಾದ ಸೀಟಿಗೆ 77 ಸಾವಿರ ಹಾಗೂ ಖಾಸಗಿ ಆಡಳಿತ ಮಂಡಳಿ ಕೋಟಾದ ಸೀಟಿಗೆ 6,32,500 ರೂ. ನಿಗದಿ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next