ಮಂಗಳೂರು : 2022- 23ನೇ ಸಾಲಿನಲ್ಲಿ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಪಾರಂಪರಿಕ ವೈದ್ಯರ ಮಕ್ಕಳಿಗೆ ವಿಶೇಷ ಪ್ರಕರಣದಡಿ ಸರಕಾರಿ ಕೋಟಾದಲ್ಲಿ 2 ಸೀಟುಗಳು ಲಭ್ಯವಿವೆ. ಅರ್ಹರು ಅರ್ಜಿ ಸಲ್ಲಿಸಬಹುದು.
Advertisement
ಬಳ್ಳಾರಿಯ ತಾರಾನಾಥ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಮೈಸೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳಲ್ಲಿ ಸರಕಾರಿ ಕೋಟಾದಡಿ ಸೀಟು ಮೀಸಲಿರಿಸಲಾಗಿದೆ.
ಅರ್ಹರು ಡಿ. 17ರ ಸಂಜೆ 5.30 ರೊಳಗೆ ಬೆಂಗಳೂರಿನ ಧನ್ವಂತರಿ ರಸ್ತೆಯಲ್ಲಿರುವ ಆಯುಷ್ ನಿರ್ದೇ ಶನಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಆಯುಷ್ ಅಧಿಕಾರಿ ತಿಳಿಸಿದ್ದಾರೆ.