Advertisement

ಕೋವಿಡ್ ಸೋಂಕಿತ ಮೃತ ವ್ಯಕ್ತಿಯಿಂದ ವೈದ್ಯಕೀಯ ಪರೀಕ್ಷಕನಿಗೂ ಸೋಂಕು

09:32 PM Apr 15, 2020 | Hari Prasad |

ಥಾಯ್ಲೆಂಡ್ ನ‌ ವೈದ್ಯಕೀಯ ಪರೀಕ್ಷಕರೊಬ್ಬರು ಸಾವಿಗೀಡಾಗಲು, ಅವರು ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟ ರೋಗಿಯೊಬ್ಬರ ದೇಹದಲ್ಲಿದ್ದ ವೈರಸ್‌ ಸಂಪರ್ಕಕ್ಕೆ ಬಂದಿದ್ದೇ ಕಾರಣ ಎಂದು ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಬ್ಯಾಂಕಾಕ್‌ನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವೈದ್ಯಕೀಯ ಪರೀಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು, ಇಂತಹ ಪ್ರಕರಣ ಜಗತ್ತಿನ ಬೇರೆಲ್ಲೂ ವರದಿಯಾಗಿಲ್ಲ ಎಂದು “ಡೈಲಿ ಮೈಲ್‌’ ವರದಿ ಮಾಡಿದೆ.

ಹೀಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿ, ಸೋಂಕಿನಿಂದ ರಕ್ಷಣೆ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಅಥವಾ ವಿಲೇವಾರಿ ಮಾಡುವಾಗ ಸಂಬಂಧಿಸಿದ ಕೆಲಸಗಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು.

ನಿಲ್ಲದ ಲಕ್ಷಣ ರಹಿತ ಕೇಸುಗಳು
ಬೀಜಿಂಗ್‌: ಚೀನದಲ್ಲಿ ವಿದೇಶಗಳಿಂದ ಬಂದವರಲ್ಲಿನ ಕೋವಿಡ್ 19 ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ ಸೋಂಕು ಇದೆ ಎಂದು ಪ್ರಕಟವಾಗಿರುವ ವುಹಾನ್‌ನಲ್ಲಿಯೇ ಸೋಮವಾರ 89 ಲಕ್ಷಣ ರಹಿತ (asymptomatic) ಪ್ರಕರಣಗಳು ದೃಢಪಟ್ಟಿವೆ. ಇದರ ಜತೆಗೆ ಗ್ವಾಂಗ್ವಾಂಗ್‌ನಲ್ಲಿಯೇ ಮೂರು ಸ್ಥಳೀಯ ಕೇಸುಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

Advertisement

ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ, ವಿದೇಶಗಳಿಂದ ಬಂದ ಸೋಂಕಿನ ಪ್ರಕರಣಗಳ ಸಂಖ್ಯೆ 1,464ಕ್ಕೆ ಏರಿಕೆಯಾಗಿದೆ. ಲಕ್ಷಣ ರಹಿತ ಪ್ರಕರಣಗಳೆಂದರೆ ಕೋವಿಡ್ 19 ವೈರಸ್ ಸೋಂಕು ಎಂದು ದೃಢಪಟ್ಟರೂ ಜ್ವರ, ಕೆಮ್ಮು, ಗಂಟಲು ಕೆರೆತ ಅವರಲ್ಲಿ ಕಂಡುಬರುವುದಿಲ್ಲ. ಸೋಮವಾರಕ್ಕೆ ಮುಕ್ತಾಯವಾದಂತೆ 82,249 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, 3,341 ಮಂದಿ ಅಸುನೀಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next