Advertisement
ರುದ್ರಾಕ್ಷಿಯ ಚೂರ್ಣ ಅಥವಾ ಭಸ್ಮಗಳನ್ನು ಇತರ ಕೆಲವು ಸಸ್ಯೌಷಧಿಗಳೊಡನೆ ಸೇರಿಸಿ ಕ್ರಮಬದ್ಧವಾಗಿ ಸೇವಿಸಿದರೆ ಹಲವಾರು ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳನ್ನು ನಿವಾರಿಸಬಹುದು.
Related Articles
ಅನಗತ್ಯ ಬೊಜ್ಜನ್ನು ಕರಗಿಸಬಹುದು. ಮೆದುಳಿನ ಕಾರ್ಯ ವೈಖರಿಯನ್ನು ಸುಗಮಗೊಳಿಸಿ ಕಣ್ಣು ಕಿವಿ, ಗಂಟಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೇಂದ್ರ ನರಮಂಡಲದ ಮೇಲೂ ಒಳ್ಳೆಯ ಪರಿಣಾಮ ಬೀರಿ ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಹತೋಟಿಯಲ್ಲಿಡಬಹುದು. ಈ ವಿಷಯಗಳು ಹಲವು ಆಯುರ್ವೇದ ಸಂಹಿತೆಗಳಲ್ಲಿ ನಿರೂಪಿಸಲ್ಪಟ್ಟಿವೆ.
Advertisement
ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ?
ಆಧುನಿಕ ವಿಜ್ಞಾನ ಪದ್ಧತಿಯಲ್ಲಿ ಸಂಶೋಧನೆ ಮಾಡಿದರೆ ಇನ್ನೂ ಹಲವಾರು ಅಮೂಲ್ಯ ಗುಣಗಳು ಪ್ರಕಟಗೊಳ್ಳಬಹುದು. ಇದಕ್ಕೆ ವೈದ್ಯ ವಿಜ್ಞಾನದ ಹಲವಾರು ವಿಭಾಗಗಳಲ್ಲಿನ ತಜ್ಞರು, ರಸಾಯನ ಶಾಸ್ತ್ರ, ಶರೀರ ಶಾಸ್ತ್ರ ಸೂಕ್ಷ್ಮಾಣು ವಿಜ್ಞಾನ (ಮೈಕ್ರೋಬಯಾಲಜಿ) ಇತ್ಯಾದಿಗಳಲ್ಲಿ ಸಂಶೋಧನೆ ಮಾಡಿದವರು ಒಟ್ಟುಗೂಡಿ ಸಂಶೋಧನೆ ಮಾಡಿ ಪರಿಣಾಮಗಳನ್ನು ಸರಿಯಾಗಿ ವಿಶ್ಲೇಷಿಸಿದರೆ ಇನ್ನೂ ಹಲವಾರು ಆಶ್ಚರ್ಯಕರ ಪರಿಣಾಮಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್
ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details
ಮುಂದುವರಿಯುವುದು…
(ನಾಳೆ: ರುದ್ರಾಕ್ಷಿಯ ವೈದ್ಯಕೀಯ ಪರಿಣಾಮಗಳ ವೈಜ್ಞಾನಿಕ ಹಿನ್ನಲೆ)