Advertisement

ಕಾಯಿಲೆಯಿಂದ ನರಳುತ್ತಿದ್ದ ಬಾಲಕನಿಗೆ ಸಿಕ್ಕಿತು ನೆರವಿನ ಮಹಾಪೂರ

02:55 AM Jun 12, 2021 | Team Udayavani |

ಹೈದರಾಬಾದ್‌: ಸ್ಪೈನಲ್‌ ಮಸ್ಕ್ಯುಲರ್ ಅಟ್ರೋಪಿ (ಎಸ್‌ಎಂಎ) ಎಂಬ ವಿರಳ ಕಾಯಿಲೆಯಿಂದ ನರಳುತ್ತಿದ್ದ ಬಾಲಕನಿಗೆ ಭಾರೀ ನೆರವು ಸಿಕ್ಕಿದೆ.

Advertisement

ಆತನ ಚಿಕಿತ್ಸೆಗೆ ಝೋಲ್ಜೆನ್‌ಮಾ ( Zolgensma) ಎಂಬ ಹೆಸರಿನ ಔಷಧ ಬೇಕಾಗಿತ್ತು. ಅದರ ಬೆಲೆಯೇ 16 ಕೋಟಿ ರೂ. ಸಿಕಂದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಯಾಂಶ್‌ ಎಂಬ ಬಾಲಕನಿಗೆ ಈ ಔಷಧ ನೀಡಲಾಗಿದೆ.

ದುಬಾರಿಯಾಗಿದ್ದ ಔಷಧ ತರಿಸಲು ಆತನ ಹೆತ್ತವರಿಗೆ ಹೊರೆ ಯಾಗಿತ್ತು. ಹಾಗಾಗಿ, ಫೆ.4ರಂದು ಸಾರ್ವಜನಿಕರ ಮೊರೆ ಹೋಗಿದ್ದರು. ಮೇ 24ರ ವರೆಗೆ ಸುಮಾರು 65 ಸಾವಿರ ಜನರಿಂದ 16 ಕೋಟಿ ರೂ. ಸಂಗ್ರಹವಾಗಿತ್ತು. ಅಮೆರಿಕದ ನೊರ್ವಾ ಟಿಸ್‌ನಿಂದ ಔಷಧ ಜೂ. 8ರಂದು ಬಂದು ತಲುಪಿತ್ತು. ಕೇಂದ್ರ ಸರಕಾರ ಕೂಡ 6 ಕೋಟಿ ರೂ.ಗಳಷ್ಟಿದ್ದ ಆಮದು ಸುಂಕ ಹಾಗೂ ಜಿಎಸ್‌ಟಿ ಯನ್ನು ಮನ್ನಾ ಮಾಡಿ ಸಹಾಯ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next