ನವದೆಹಲಿ: ಪದವಿ ಪೂರ್ವ ಮೆಡಿಕಲ್ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾಗಿರುವ NEET ಗೆ ದಿನಾಂಕ ನಿಗದಿಯಾಗಿದ್ದು, ಮುಂಬರುವ ಆಗಸ್ಟ್ 1 ಕ್ಕೆ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ NTA, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯನ್ನು ಒಳಗೊಂಡಂತೆ ಒಟ್ಟು 11 ಭಾಷೆಗಳಲ್ಲಿ ಮುಂಬರುವ ಆಗಸ್ಟ್ 1 ರಂದು ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ.
ಈ ನಡುವೆ ಆಯಾ ಕೋರ್ಸ್ ಗಳ ನೀತಿ- ನಿಯಮಗಳ ಅನ್ವಯ MBBS, MDS,BAMS,BSMS,ಮತ್ತು BHMS ಕೋರ್ಸ್ ಗಳಿಗೆ ಪ್ರವೇಶಾತಿ ನೀಡುವ ಹಿನ್ನೆಲೆಯಲ್ಲಿ NTA, NEET ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ,ಸಿಸಿರ್ ಅಧಿಕಾರಿ ಭೇಟಿ.! ಬಿಜೆಪಿ ಸೇರ್ಪಡೆಗೆ ಸಿಸಿರ್ ಒಲವು.?
ಈ ಕುರಿತಾದ ಹೆಚ್ಚಿನ ಮಾಹಿತಿಗಳಾದ ಪಠ್ಯಕ್ರಮ, ಸೇರಿದಂತೆ ಅರ್ಹತೆಗಳಾದ ವಯಸ್ಸು, ಮೀಸಲಾತಿ, ಸೀಟ್ ಗಳ ಹಂಚಿಕೆ ಇತ್ಯಾದಿ ಕುರಿತಾದ ಮಾಹಿತಿಗಳನ್ನು NEET ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭಗೊಂಡ ಬಳಿಕ ತಿಳಿಸಲಾಗುವುದು ಎಂದು NTA ತಿಳಿಸಿದೆ.