ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ಹೆಚ್ಚಳವಾಗುತ್ತಿದೆ. ಸೋಂಕಿನಿಂದ ಮೃತರಾಗುತ್ತಿರವವರ ಸಂಖ್ಯೆಯೂ ಏರಿಕೆಯಾಗುತ್ತಿರವ ಕಾರಣದಿಂದಾಗಿ ರಾಜ್ಯ ಕಾಂಗ್ರೆಸ್ ಪಕ್ಷ, ಕೋವಿಡ್ ಸೋಂಕನ್ನು ನಿವಾರಿಸುವಲ್ಲಿ ಬಿಜೆಪಿ ವಿಫಲಗೊಂಡಿದೆ ಎಂಬಂತೆ ಆರೋಪಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ಸೇರಿ ದೇಶದ ಹಲವೆಡೆ ಕೋವಿಡ್ ಸೋಂಕಿನ ಚಿಕಿತ್ಸೆಗೆ ಆಮ್ಲಜನಕ, ಲಸಿಕೆಗಳ ಕೊರತೆ ಇದೆ ಎಂಬ ಆರೋಪಗಳ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ತೀವ್ರವಾಗಿ ಟೀಕೆ ಮಾಡಿದೆ.
ಈ ಬಗ್ಗೆ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಜ್ಯ ಕಾಂಗ್ರೆಸ್, ಕೋವಿಡ್ ಸೋಂಕಿನ ನಿವಾರಣೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಇವೆ ಎನ್ನುವುದು ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿಯ ಟ್ವಿಟರ್ ಗಳಲ್ಲಿ ಮಾತ್ರ ಎಂದು ಕಟುವಾಗಿ ಆರೋಪಿಸಿದೆ.
ಓದಿ : ಬೀದರ್ ನಗರಸಭೆ ಚುನಾವಣೆ: ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ
“ಲಸಿಕೆ ಸಾಕಷ್ಟು ಇದೆ, ಆಕ್ಸಿಜನ್ ಬೇಕಾದಷ್ಟಿದೆ ಬೆಡ್ ಗಳು ಸರಾಗವಾಗಿ ಸಿಗುತ್ತಿದೆ, ರೆಮಿಡಿಸಿವಿರ್ ಸಾಕಷ್ಟಿದೆ ರಾಜ್ಯದಲ್ಲಿ ಸೋಂಕಿತರು ಸಾಯುತ್ತಲೇ ಇಲ್ಲ ಯಾವುದೇ ವೈದ್ಯಕೀಯ ಸಮಸ್ಯೆಗಳೇ ಇಲ್ಲ” ಇದೆಲ್ಲವೂ ಫೇಕ್ ಫ್ಯಾಕ್ಟರಿ ಖ್ಯಾತಿಯ ಬಿಜೆಪಿ ಟ್ವೀಟರ್ ಗಳಲ್ಲಿ ಮಾತ್ರ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಆಕ್ರೋಶ ಹೊರ ಹಾಕಿದೆ.
ಇನ್ನು, ಜನ ಸಾಯುತ್ತಿದ್ದಾರೆ, ಇವರ ಸುಳ್ಳು ಮುಂದುವರಿಯುತ್ತಲೇ ಇದೆ ಎಂದು ಕೂಡ ಹೇಳಿದೆ.
ಮತ್ತೊಂದು ಟ್ವೀಟ್ ನಲ್ಲಿ, “ಮಾತಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಇಲ್ಲದೆ ಅಧ್ವಾನ” ಎಂದು ಕೂಡ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.
ಇನ್ನು, ಒಂದು ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದು, ಸೀರಂ ಇನ್ಸ್ಟಿಟ್ಯೂಟ್ 1 ತಿಂಗಳಲ್ಲಿ 5-6 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದೆ. ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಕೂಡಾ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಓದಿ : ಜೀವ ಬೆದರಿಕೆಯಿದ್ದರೂ ಪೊಲೀಸ್ ಭದ್ರತೆ ನಿರಾಕರಿಸಿದ ನಟ ಸಿದ್ಧಾರ್ಥ್