Advertisement
2015-21ರ ಅವಧಿಯಲ್ಲಿ ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದ ಭಾರತೀಯರಲ್ಲಿ ಕೇವಲ ಶೇ.16 ವೈದ್ಯರು ಮಾತ್ರ ಭಾರತದಲ್ಲಿ ಅಭ್ಯಾಸಕ್ಕೆ ಅವಕಾಶ ಪಡೆದಿದ್ದಾರೆ. ಇದೇ ಅವಧಿಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯ ವಿದೇಶಿ ವೈದ್ಯಕೀಯ ಪದವೀಧರರ(ಎಫ್ಎಂಜಿ) ಪರೀಕ್ಷೆಯನ್ನು 40,417 ವಿದ್ಯಾರ್ಥಿಗಳು ಬರೆದಿದ್ದು, ಅದರಲ್ಲಿ ಕೇವಲ 6,387 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
Related Articles
Advertisement
ಕಳೆದ ಎರಡು ವರ್ಷಗಳಿಂದ ಚೀನ ವೀಸಾಗಳು ನಿಷೇಧವಾಗಿರುವ ಹಿನ್ನೆಲೆ ಚೀನದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿಗಳು ಭಾರತದಲ್ಲೇ ಇರುವಂತಾಗಿದೆ. ಚೀನ ಕೆಲವು ವಿದ್ಯಾರ್ಥಿಗಳಿಗೆ ವೀಸಾ ಕೊಡಲು ಆರಂಭಿಸಿದೆಯಾದರೂ ಚೀನಕ್ಕೆ ನೇರವಾಗಿ ವಿಮಾನ ಸಂಪರ್ಕ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ.