Advertisement

ವೈದ್ಯಕೀಯ ಪೂರಕ ಉಪಕರಣ ಕೊಡುಗೆ

05:34 PM May 20, 2021 | Team Udayavani |

ಚಿಕ್ಕಬಳ್ಳಾಪುರ: ನಗರದ ಜೈನ್‌ ಖಾಸಗಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿಸಲು ಯೋಜಿಸಲಾಗಿದ್ದು ಬೇಕಾಗಿರುವ ಹಲವು ವೈದ್ಯಕೀಯ ಪೂರಕ ಉಪಕರಣ ಪೂರೈಸಲು ಇಶಾ ಫೌಂಡೇಶನ್‌ ಸ್ವಇಚ್ಛೆಯಿಂದ ಮುಂದೆ ಬಂದಿರುವುದು ಶ್ಲಾಘನೀಯಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ಬುಧವಾರ ನಗರ ಹೊರವಲಯದ ಜೈನ್‌ಖಾಸಗಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ವತಿಯಿಂದಕೋವಿಡ್‌ ಆಸ್ಪತ್ರೆ ಮಾಡಲು ಸುಮಾರು 15ಲಕ್ಷ ರೂ.ಮೌಲ್ಯದ ವೈದ್ಯಕೀಯ ಪೂರಕ ಉಪಕರಣಗಳನ್ನುಇಶಾ ಫೌಂಡೇಶನ್‌ ಅವರಿಂದ ಪಡೆದು ಮಾತನಾಡಿದರು. ಜಿಲ್ಲಾಡಳಿತ ಮತ್ತು ಜೈನ್‌ ಟ್ರಸ್ಟ್‌ ಸಂಸ್ಥೆಯ ಸಹಯೋಗದಲ್ಲಿ ನಗರದ ಜೈನ್‌ ಖಾಸಗಿ ಆಸ್ಪತ್ರೆಯನ್ನುಸದ್ಯದಲ್ಲೇ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಲುಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಇಶಾಫೌಂಡೇಶನ್‌ 15 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಇಸಿಜಿ ಯಂತ್ರ, ಆಟೋಮ್ಯಾಟಿಕ್‌ಮಲ್ಟಿ ಪ್ಯಾರಾಮೀಟರ್‌, ಕಾರ್ಡಿಯಾಕ್‌ ಮಿಷನ್‌,ಫೇಸ್‌ ಟ್ರ್ಯಾಕ್ , ಡ್ರೆಸ್ಸಿಂಗ್‌ ಬಿನ್‌, ಹಾಟ್‌ ವಾಟರ್‌ಬ್ಯಾಗ್‌ ಇನ್ನು ಮುಂತಾದ ವೈದ್ಯಕೀಯ ಪೂರಕ ಉಪಕರಣ ಕೊಡುಗೆಯಾಗಿ ನೀಡಿದ್ದಾರೆಂದರು.

ಇದಲ್ಲದೆಮುಂದಿನದಿನಗಳಲ್ಲಿ100ಆಮ್ಲಜನಕಜಂಬೋ ಸಿಲಿಂಡರ್‌ ನೀಡುವುದಾಗಿಇಶಾಫೌಂಡೇಶನ್‌ ಸಂಸ್ಥೆಯ ರಾಘವೇಂದ್ರ ಶಾಸ್ತ್ರಿ ಮತ್ತು ಪ್ರಭಾಕರ್‌ ತಿಳಿಸಿದ್ದಾರೆ.ಕೋವಿಡ್‌ ಸಂಕಷ್ಟದಈಸ್ಥಿತಿಯಲ್ಲಿಸರ್ಕಾರೇತರ ಸಂಸ್ಥೆಗಳು ಈರೀತಿಯಾಗಿ ಕೋವಿಡ್‌ನಿಯಂತ್ರಿಸಲು ಜಿಲ್ಲಾಡಳಿತದ ಬೆಂಬಲಕ್ಕೆ ನಿಂತಿರುವಇಶಾ ಫೌಂಡೇಶನ್‌ ಮತ್ತು ಜೈನ್‌ ಟ್ರಸ್ಟ್‌ಸಂಸ್ಥೆಯವರಿಗೆ ವಿಶೇಷವಾದ ಧನ್ಯವಾದ ಎಂದರು.ಇದೇ ವೇಳೆ ರೋಟರಿ ಕ್ಲಬ್‌ ಸಂಸ್ಥೆಯವರುಜಿಲ್ಲಾ ಸರ್ಕಾರಿ ನೌಕರರ ಸಂಘದ ಮುಖಾಂತರ 1ಆಕ್ಸಿಜನ್‌ ಕಾನ್ಸಂಟ್ರೇಟರ್‌ ಅನ್ನು ಜಿಲ್ಲಾಡಳಿತಕ್ಕೆನೀಡಿದರು.

ಸರ್ಕಾರೇತರ ಸಂಸ್ಥೆಗಳು ನೀಡುವ ಈಅಮೂಲ್ಯ ಕೊಡುಗೆಗಳನ್ನು ಜಿಲ್ಲಾಡಳಿತ ಸದ್ವಿನಿಯೋಗ ಮಾಡಿಕೊಳ್ಳಲಿದೆ. ಕೋವಿಡ್‌ ಸೋಂಕುನಿಯಂತ್ರಿಸಲು ಈವರೆಗೆ ಸಹಕಾರ ಸಹಾಯಹಸ್ತಚಾಚಿದ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಿಗೆಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ರಮೇಶ್‌,ಉಪವಿಭಾಗಾಧಿಕಾರಿ ಎ.ಎನ್‌. ರಘುನಂದನ್‌,ಇಶಾ ಫೌಂಡೇಶನ್‌ ಸಂಸ್ಥೆಯ ರಾಘವೇಂದ್ರಶಾಸ್ತ್ರಿ,ಪ್ರಭಾಕರ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದಜಂಟಿ ಕಾರ್ಯದರ್ಶಿ ಸುನೀಲ್‌ ಪಿ.ಆರ್‌,ಪದಾಧಿಕಾರಿಗಳಾದ ಅಮರ್‌, ನಾಗರಾಜಪ್ಪ , ಜೈನ್‌ಟ್ರಸ್ಟ್‌ನ ಪದಾಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next