Advertisement

ಅಯೋಧ್ಯೆ ವಿವಾದ: ಸುಪ್ರೀಂ ಕೋರ್ಟ್‌ನಿಂದ ಇಂದು ಮಧ್ಯಸ್ಥಿಕೆ ಆದೇಶ ?

05:46 AM Mar 06, 2019 | udayavani editorial |

ಹೊಸದಿಲ್ಲಿ : ಅಯೋಧ್ಯೆ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಕೋರ್ಟ್‌ ನಿಗಾವಣೆಯ ಮಧ್ಯಸ್ಥಿಕೆ ಆದೇಶ ನೀಡಬಹುದೇ ಬೇಡವೇ ಎಂಬುದನ್ನು ಸುಪ್ರೀಂ ಕೋರ್ಟ್‌ ನ ಐವರು ನ್ಯಾಯಮೂರ್ತಿಗಳ ಪೀಠವು ಇಂದು ಬುಧವಾರ ನಿರ್ಧರಿಸಲಿದೆ.

Advertisement

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಜಸ್ಟಿಸ್‌ ಗಳಾದ ಎಸ್‌ ಎ ಬೋಬಡೆ, ಡಿವೈ ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌ ಅಬ್ದುಲ್‌ನಜೀರ್‌ ಅವರನ್ನು ಒಳಗೊಂಡ ಪೀಠವು ಅಯೋಧ್ಯೆ ವಿವಾದದ ಕೇಸಿನಲ್ಲಿ  ಮಧ್ಯಸ್ಥಿಕೆ ಆದೇಶವನ್ನು ಇಂದು ಬಹುತೇಕ ಹೊರಡಿಸಲಿದೆ ಎಂದು ವರದಿಗಳು ಹೇಳಿವೆ. 

ದಶಕಗಳಷ್ಟು ಹಳೆಯ ಬಾಬರಿ ಮಸೀದಿ – ರಾಮಜನ್ಮಭೂಮಿಯ ಒಡೆತನಕ್ಕೆ ಸಂಬಂಧಿಸಿದ ವಿವಾದವನ್ನು ಕೋರ್ಟ್‌ ನಿಗಾವಣೆಯ ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಯತ್ಸಿಸುವುದಕ್ಕೆ ಅವಕಾಶ ಕಲ್ಪಿಸುವ ಸಿವಿಲ್‌ ಪ್ರೊಸೀಜರ್‌ ಕೋಡ್‌ ನ ಸೆ.89ನ್ನು ಬಳಸಸಬಹುದೇ ಎಂಬುದನ್ನು ಐವರು ನ್ಯಾಯಮೂರ್ತಿಗಳ ಸುಪ್ರೀಂ ಪೀಠ ಇಂದು ನಿರ್ಧರಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next