Advertisement

ಶುಚಿತ್ವ ಕಾಪಾಡಿಕೊಳ್ಳದಿದ್ದಲ್ಲಿ ದುಡಿದ ಹಣದ ಅರ್ಧ ನಷ್ಟ

01:08 PM Oct 21, 2017 | |

ದಾವಣಗೆರೆ: ವೈಯಕ್ತಿಕ ಶುಚಿತ್ವ ಮತ್ತು ಪರಿಸರ ಕಾಳಜಿ ವಿಷಯಗಳೇ ನಗರದ ಅಭಿವೃದ್ಧಿಯನ್ನು ತೀರ್ಮಾನಿಸಲಿವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

Advertisement

5ನೇ ವಾರ್ಡ್‌ನಲ್ಲಿ ಮಹಾನಗರ ‌ಪಾಲಿಕೆ, ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಸಮಗ್ರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ ಹಾಗೂ ಸ್ಕೊಡ್‌ವೆಸ್‌ ಸಂಸ್ಥೆಯ ಸಹಯೋಗದಲ್ಲಿ ಫಲಿತಾಂಶ ಆಧಾರಿತ ನೆರವು ಶೌಚಾಲಯ ಕಾರ್ಯಕ್ರಮದ ಶೌಚಾಲಯ ನಿರ್ಮಾಣದ 247 ಕಾರ್ಯಾದೇಶ ಪತ್ರ ವಿತರಣೆ ಮತ್ತು ಅರಿವು ನೆರವು
ಸಮಾರಂಭದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಶುಚಿತ್ವ, ಪರಿಸರ ಕಾಪಾಡಿಕೊಳ್ಳದೇ ಇದ್ದಲ್ಲಿ ಸಂಪಾದನೆಯ
ಅರ್ಧದಷ್ಟು ಭಾಗವನ್ನು ರೋಗ ರುಜೀನಗಳನ್ನು ಸುಧಾರಿಸಿಕೊಳ್ಳುವ ಸಲುವಾಗಿಯೇ ವ್ಯಯ ಮಾಡಬೇಕಾಗುತ್ತದೆ. ಕುಟುಂಬಗಳು ಮತ್ತು ಸಮಾಜಕ್ಕೂ ಆರ್ಥಿಕ ನಷ್ಟವಾಗುತ್ತದೆ. ಎಲ್ಲರ ಆರೋಗ್ಯ ಶುಚಿತ್ವದಲ್ಲಿ ಇದೆ ಎಂದು ತಿಳಿಸಿದರು.

ಒಂದು ಕಾಲಕ್ಕೆ ಮಲ ಹೊರುವ ಪದ್ಧತಿ ಚಾಲ್ತಿಯಲ್ಲಿತ್ತು. ಅದರ ವಿರುದ್ದವಾಗಿ ದಿ.ಬಿ. ಬಸವಲಿಂಗಪ್ಪ ಅವರೊಟ್ಟಿಗೆ ಕೈಜೋಡಿಸಿ ಹೋರಾಟ ಮಾಡಿದ್ದೆವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಒಳಚರಂಡಿ ವ್ಯವಸ್ಥೆ ಅತ್ಯಂತ ವೈಜ್ಞಾನಿಕವಾಗಿ ಸುಧಾರಣೆ  ಯಾಗಿರುವುದರಿಂದ ಇಂತಹ ಕಾರ್ಯಕ್ರಮಗಳ ಜಾರಿಗೊಳಿಸುವ ಮುಖಾಂತರ ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ
ನಿರ್ಮೂಲನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸ್ವಚ್ಚತೆ ಮತ್ತು ಸೌಂದಯೀìಕರಣಕ್ಕೆ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ. ಎಲ್ಲರೂ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು. ದಾವಣಗೆರೆಯ ಮುನ್ನಡೆಗೆ ಜನರ ಸಹಕಾರದ ನಡಿಗೆಯು ಮುಖ್ಯ ಎಂದು ತಿಳಿಸಿದರು. ಈ ಕಾರ್ಯಕ್ರಮ ಶೌಚಾಲಯ ರಹಿತ ಮನೆಗಳನ್ನು ಗುರುತಿಸಿ ಮನೆ ಬಾಗಿಲಲ್ಲಿಯೇ ಅರ್ಜಿ ಮತ್ತು ಪೂರಕ ದಾಖಲೆಗಳ ಸಂಗ್ರಹಿಸಿ ಫಲಾನುಭವಿಗೆ ಅರಿವು ಮತ್ತು ಆರ್ಥಿಕ ನೆರವು ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಹಾಗೂ ಶೌಚಾಲಯ ತ್ವರಿತ ನಿರ್ಮಾಣಕ್ಕೆ ಸ್ಕೊಡ್ವೆಸ್‌ ಸಂಸ್ಥೆಯವರು ಕ್ರಮವಹಿಸಬೇಕು ಎಂದು ತಿಳಿಸಿದರು.

ದಾವಣಗೆರೆ ನಗರದ ವ್ಯಾಪ್ತಿಯಲ್ಲಿ 4,455 ಮನೆಗಳ ಶೌಚಾಲಯ ನಿರ್ಮಾಣ ಗುರಿ ಹೊಂದಿದ್ದು ವಾರ್ಡ ನಂಬರ್‌ 5 ರಲ್ಲಿ 247 ಶೌಚಾಲಯ ರಹಿತ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ಮಾಡಲಾಗಿದೆ. ಇನ್ನು ಮೂರು ತಿಂಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಮಹಾನಗರ ಪಾಲಿಕೆ ಸದಸ್ಯ ಆರ್‌. ಪರಸಪ್ಪ, ಶಶಿಕುಮಾರ್‌, ತಿರುಪತಿ, ಯುವರಾಜು, ಬಸವಕುಮಾರ್‌, ಎಂ. ನಾಗರಾಜ, ಎನ್‌.ಎ. ಲವ, ಮಂಜುಳಾ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next