Advertisement

ಮಾಧ್ಯಮ ನಮ್ಮ ಗುರಿ ಅಲ್ಲ : ದಾಂತೇವಾಡ ದಾಳಿ ಬಗ್ಗೆ ನಕ್ಸಲ್‌ ಪತ್ರ

11:12 AM Nov 02, 2018 | udayavani editorial |

ಹೊಸದಿಲ್ಲಿ : ‘ಮಾಧ್ಯಮದವರನ್ನು ಗುರಿ ಇರಿಸಿ ನಾವು ದಾಳಿ ಮಾಡುವುದಿಲ್ಲ; ಹಾಗೆಯೇ ಮಾಧ್ಯಮದವರು ಚುನಾವಣಾ ಕರ್ತವ್ಯದಲ್ಲಿರುವ ಪೊಲೀಸರೊಂದಿಗೆ ಜತೆಗೂಡಿ ನಕ್ಸಲ್‌ ಪೀಡಿತ ಸಮರ ತ್ರಸ್ತ ತಾಣಗಳಿಗೆ ಬರಬಾರದು’ ಎಂದು “ದಾಂತೇವಾಡ ದಾಳಿ” ಫ‌ಲಶ್ರುತಿಯಾಗಿ ನಕ್ಸಲರು ಹೇಳಿದ್ದಾರೆ.

Advertisement

ದಾಂತೇವಾಡ ಜಿಲ್ಲೆಯಲ್ಲಿ ತಾವು ನಡೆಸಿದ್ದ ಹೊಂಚು ದಾಳಿಯಲ್ಲಿ ದೂರದರ್ಶನ ಕ್ಯಾಮೆರಾಮ್ಯಾನ್‌ ತಮ್ಮ ಗುಂಡಿಗೆ ಬಲಿಯಾಗಿರುವುದನ್ನು ಉಲ್ಲೇಖೀಸಿ ನಕ್ಸಲರು “ಮಾಧ್ಯಮದವರು ಯಾವತ್ತೂ ನಮ್ಮ ಗುರಿ ಅಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ವರದಿಗಳು ತಿಳಿಸಿವೆ. 

ನಕ್ಸಲರ ಈ ನಿಲುವಿನ ಬಗ್ಗೆ ಸಿಪಿಎಂ ಅಧಿಕೃತ ಪ್ರಕಟನೆಯನ್ನು ಇಂದು ಶುಕ್ರವಾರ ಹೊರಡಿಸಿದೆ. 

ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದ್ದ  ದಾಳಿಯಲ್ಲಿ ಡಿಡಿ ಕ್ಯಾಮೆರಾಮ್ಯಾನ್‌ ಅಚ್ಯುತಾನಂದ ಸಾಹು ಮತ್ತು ಇಬ್ಬರು ಪೊಲೀಸರು ನಕ್ಸಲರ ಗುಂಡಿಗೆ ಕಳೆದ ಮಂಗಳವಾರ ಬಲಿಯಾಗಿದ್ದರು. 

ಸಿಪಿಎಂ ಬಿಡುಗಡೆ ಮಾಡಿರುವ ಎರಡು ಪುಟಗಳ ಕೈಬರಹದ ಪತ್ರಕ್ಕೆ ದರ್ಭಾ ವಿಭಾಗದ ಸಿಪಿಎಂ ಸಮಿತಿಯ ಮುಖ್ಯಸ್ಥ ಸಾಯಿನಾಥ್‌ ಸಹಿ ಹಾಕಿದ್ದು ಇದನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next