Advertisement

Shivamogga; ಆನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

11:15 PM Aug 24, 2024 | Vishnudas Patil |

ಶಿವಮೊಗ್ಗ: ತಾಲೂಕಿನ ಆಲದೇವರ ಹೊಸೂರು ಗ್ರಾಮದಲ್ಲಿ ಶನಿವಾರ(ಆ.25) ಆನೆ ದಾಳಿಗೆ ಕೃಷಿ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ.

Advertisement

ಹನುಮಂತಪ್ಪ(45) ಆನೆ ದಾಳಿಗೆ ಬಲಿಯಾದ ಕೃಷಿ ಕಾರ್ಮಿಕ.ಪುರದಾಳು ಗ್ರಾ.ಪಂ ವ್ಯಾಪ್ತಿಯ ಆಲದೇವರ ಹೊಸೂರು ಗ್ರಾಮದಲ್ಲಿ ರಾತ್ರಿ 8 ಗಂಟೆ ವೇಳೆಗೆ ತೋಟದಲ್ಲಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ.

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಹನುಮಂತಪ್ಪ ಲಕ್ಷ್ಮೇಶ್ವರ ಮೂಲದ ನಿವಾಸಿ ಎಂದು ತಿಳಿದು ಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಶಿವಮೊಗ್ಗ ವನ್ಯಜೀವಿ ವಿಭಾಗದ ಅಧಿಕಾರಿಗಳು- ಸಿಬಂದಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.