Advertisement

ಮಾಹಿತಿ ಹರಿವಿಗೆ ಮಾಧ್ಯಮ ದೊಡ್ಡ ಅಸ್ತ್ರ

08:21 AM Jul 29, 2019 | Suhan S |

ಹುಬ್ಬಳ್ಳಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕುಳಿತ ಸ್ಥಳದಿಂದಲೇ ಇಡೀ ಜಗತ್ತಿನ ವಿದ್ಯಮಾನಗಳನ್ನು ಶರವೇಗದಲ್ಲಿ ನೋಡಬಹುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Advertisement

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ರವಿವಾರ ನಡೆದ ಪತ್ರಿಕಾ ದಿನಾಚರಣೆ, ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೆ ಓದುವುದರಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪತ್ರಿಕೆಯನ್ನು ಮನೆಗೆ ತರಿಸಿಕೊಳ್ಳಬೇಕು. ಮಾಹಿತಿಗಳನ್ನು ಸಮಾಜಕ್ಕೆ ತಲುಪಿಸಬೇಕಾದರೆ ಮಾಧ್ಯಮ ದೊಡ್ಡ ಅಸ್ತ್ರ ಎಂದು ಹೇಳಿದರು.

ಮಾಧ್ಯಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಕ್ಷೇತ್ರವನ್ನು ಕೆಲವು ಬಂಡವಾಳಶಾಹಿಗಳು ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಾಧ್ಯಮ ಜನರ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕುರಿತು ಚಿಂತನೆ ಅವಶ್ಯ ಎಂದರು.

ಹಿರಿಯ ಪತ್ರಕರ್ತ ವಿಠuಪ್ಪ ಗೋರಂಟ್ಲಿ ಮಾತನಾಡಿ, ಪತ್ರಕರ್ತರು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡುವುದರ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಮಾಧ್ಯಮ ರಂಗ ಹಣಗಳಿಕೆ ಉದ್ಯಮವಾಗಿ ಬೆಳೆಯುತ್ತಿರುವುದರಿಂದ ಮೌಲ್ಯದಲ್ಲಿ ಕುಸಿತ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಸುರೇಶ ಹಿಟ್ನಾಳ ಮಾತನಾಡಿದರು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಪಿ.ಆರ್‌. ಪಂಢರಿ ದಂಪತಿಗೆ ನೀಡಿ ಗೌರವಿಸಲಾಯಿತು. ವಿವಿಧ ವಿಭಾಗದಲ್ಲಿ ಧಾಜಿಕಾಪ ಸಂಘದ ಪ್ರಶಸ್ತಿಗೆ ಭಾಜನರಾದ ಕಾಶಪ್ಪ ಕರಿದಿನ್ನಿ, ಕುಮಾರ ಬೇಂದ್ರೆ, ವಸಂತಗೌಡ ಪಾಟೀಲ, ಅಶೋಕ ಘೋರ್ಪಡೆ, ಬಸವರಾಜ ಅಂಗಡಿ, ಈರಪ್ಪ ನಾಯ್ಕರ, ಗುರುರಾಜ ಹೂಗಾರ, ಆನಂದ ಪತ್ತಾರ, ಮೆಹಬೂಬ್‌ ಮುನವಳ್ಳಿ, ಈಶ್ವರ ಮನಗುಂಡಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Advertisement

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಪದಾಧಿಕಾರಿಗಳಾದ ಜಗದೀಶ ಬುರ್ಲಬಡ್ಡಿ, ಗಿರೀಶ ಪಟ್ಟಣಶೆಟ್ಟಿ, ಗುರುರಾಜ ಹೂಗಾರ, ಸುಶೀಲೇಂದ್ರ ಕುಂದರಗಿ, ಡಾ| ವೀರೇಶ ಹಂಡಗಿ, ಕೃಷ್ಣಾ ದಿವಾಕರ, ಗುರುನಾಥ ಭಾಂಡಗೆ, ಬಸವರಾಜ ವಿಜಾಪುರ, ಲೋಚನೇಶ ಹೂಗಾರ, ಶಿವಶಂಕರ ಕಂಠಿ, ಬಸವರಾಜ ಹೂಗಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next