Advertisement

ಕೌಶಲ್ಯ ಕೆಲಸಕ್ಕೆ ಯಾಂತ್ರೀಕರಣದ ಪೆಟ್ಟು

08:40 AM Sep 07, 2017 | Team Udayavani |

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನದಿಂದಾಗಿ ಸೇವೆಗಳು ಯಾಂತ್ರೀಕರಣ ಹೆಮ್ಮೆಯ  ಸಂಗತಿ. ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಕಡಿಮೆ ನುರಿತ ಉದ್ಯೋಗಿಗಳಿಗೆ ಅದು ಪ್ರತಿಕೂಲವಾಗಿ ಪರಿಣಮಿಸಲಿದೆ. 2022ರ ಹೊತ್ತಿಗೆ ಅಂದಾಜು 7ಲಕ್ಷ ಅಂದರೆ ಮೂರರಲ್ಲಿ ಒಂದು ಭಾಗದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ!

Advertisement

ಅಚ್ಚರಿಯಾದರೂ ಇದು ಸತ್ಯ ಎನ್ನುತ್ತಿದೆ ಅಮೆರಿಕ ಮೂಲದ ಎಚ್‌ಎಫ್ಎಸ್‌ ಅಧ್ಯಯನ ಸಂಸ್ಥೆ. ಇದೇ ವೇಳೆ ಮಧ್ಯಮ ಹಾಗೂ ಹೆಚ್ಚು ಪರಿಣತ ಉದ್ಯೋಗಿಗಳಲ್ಲೂ ಕ್ರಮವಾಗಿ 1 ಲಕ್ಷ ಹಾಗೂ 1.9 ಲಕ್ಷ ಉದ್ಯೋಗಿಗಳ ಸಂಖ್ಯೆ ಏರಿಕೆಯಾಗಲಿದೆ ಎಂದೂ ಹೇಳಿದೆ. ಐಟಿ ಕ್ಷೇತ್ರಕ್ಕೆ ಸಂಬಂಧಿಸಿ ವಿಶ್ವಾದ್ಯಂತ ಅಧ್ಯಯನ ನಡೆಸಿರುವ ಎಚ್‌ಎಫ್ಎಸ್‌ ಸಂಸ್ಥೆ, ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಹಾಗೂ ಭಾರತದಲ್ಲಿ ಅಂದಾಜು ಶೇ. 7.5ರಷ್ಟು ಉದ್ಯೋಗಾವಕಾಶಗಳು ಕುಸಿಯಲ್ಪಟ್ಟಿದೆ ಎಂದು ಹೇಳಿದೆ. ಸ್ವಯಂಚಾಲಿತ ಅರ್ಥಾತ್‌ ರೊಬೋಟ್‌ ವ್ಯವಸ್ಥೆ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದಿದೆ. ಅಂದಹಾಗೆ ಫಿಲಿಪ್ಪೀನ್ಸ್‌ನಲ್ಲಿ ಇದರ ಪರಿಣಾಮ ಅತಿಹೆಚ್ಚು ತನ್ನ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಿದೆ.

ಅಧ್ಯಯನ ಸಂಸ್ಥೆಯ ಪ್ರಕಾರ ರೊಬೋಟಿಕ್‌ ಆಟೋಮೇಷನ್‌ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತಿದ್ದು, ಇದರಿಂದ ಹೆಚ್ಚು ಪರಿಣತರ ಉದ್ಯೋಗಾವಕಾಶಗಳಲ್ಲಿ 57%ರಷ್ಟು ಹೆಚ್ಚಳ ಸಾಧ್ಯವಾ ಗಿದೆ. ಅಷ್ಟೇ ಅಲ್ಲ, ಸೇವಾ ಕ್ಷೇತ್ರದಲ್ಲಿಯೂ ಇಂಥ ರೊಬೋಟಿಕ್‌ ತಂತ್ರಜ್ಞಾನಗಳನ್ನು ಅಳವಡಿಕೆಗೆ ಹೆಚ್ಚಿನ ಬೇಡಿಕೆ ಇದ್ದೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next