Advertisement

ಯಾಂತ್ರಿಕ ಮೀನುಗಾರಿಕೆ: ಡಿಸಿ ಜತೆ ಚರ್ಚೆ

09:54 PM May 01, 2020 | Sriram |

ಉಡುಪಿ: ಮಲ್ಪೆ ಬಂದರಿನಲ್ಲಿ ಯಾಂತ್ರಿಕ ಮೀನುಗಾರಿಕೆಗೆ ಅನುವು ಮಾಡಿಕೊಡುವಂತೆ ಶಾಸಕ ಕೆ.ರಘುಪತಿ ಭಟ್‌ ಅವರು ಜಿಲ್ಲಾಧಿಕಾರಿಗಳ ಜತೆ ಜಿಲ್ಲೆಯ ವಿವಿಧ ಮೀನುಗಾರಿಕೆ ಸಂಘಗಳ ವತಿಯಿಂದ ಚರ್ಚಿಸಿದರು.

Advertisement

ಸದ್ಯ ಮೀನುಗಾರಿಕೆ ಸ್ಥಗಿತದಿಂದ ಇಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ. ಜಿಲ್ಲೆಯನ್ನು ಹಸುರು ವಲಯ ಎಂದು ಘೋಷಿಸಿದ ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರಲ್ಲಿ ಮೇ 3ರ ಅನಂತರ ಮಲ್ಪೆ ಬಂದರಿನಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಡೆಸಲು ಅನುವು ಮಾಡುವುಂತೆ ಮನವಿ ಮಾಡಲಾಯಿತು. ದಿನಕ್ಕೆ 40 ಯಾಂತ್ರೀಕೃತ ಮೀನುಗಾರಿಕಾ ಬೋಟುಗಳು ಹೊರಗೆ ಹೋಗುವುದು ಹಾಗೂ 40 ಬೋಟುಗಳು ಮೀನುಗಾರಿಕೆ ನಡೆಸಿಕೊಂಡು ಒಳಗೆ ಬಂದು ಹರಾಜು ಇಲ್ಲದೆ ಮೀನುಗಾರಿಕಾ ಸಂಘದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ ಮಾರ್ಗಸೂಚಿಯಂತೆ ಮೀನುಗಾರಿಕಾ ವ್ಯವಹಾರ ವನ್ನು ನಡೆಸುವಂತೆ ಚರ್ಚಿಸಲಾಯಿತು.

ದ.ಕ. ಮೀನುಗಾರಿಕ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ಮತ್ತು ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ ಹಾಗೂ ವಿವಿಧ ಮೀನುಗಾರಿಕಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮೀನುಗಾರಿಕೆ ಉಪನಿರ್ದೇಶಕ ಕೆ. ಗಣೇಶ್‌ ಹಾಗೂ ಹೆಚ್ಚುವರಿ ಮೀನುಗಾರಿಕೆ ನಿರ್ದೇಶಕರಾದ ಕಿರಣ್‌, ಶಿವಕುಮಾರ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next