Advertisement

ಅವಧಿಗೆ ಮೊದಲೇ ಯಾಂತ್ರಿಕ ಮೀನುಗಾರಿಕೆ ಸ್ಥಗಿತ ?

11:23 PM Apr 15, 2020 | Sriram |

ಮಲ್ಪೆ: ಒಂದೆಡೆ ಮೀನಿನ ಕ್ಷಾಮ, ಮತ್ತೂಂದೆಡೆ ಕೋವಿಡ್ 19 ಕರಿಛಾಯೆ ಮೀನುಗಾರರ ಸಾಲ, ಸಂಕಟ ಮೂರು ಪಟ್ಟು ಹೆಚ್ಚಿಸಿದೆ. ಲಾಕ್‌ಡೌನ್‌ ಮೇ 3ರ ವರೆಗೆ ವಿಸ್ತರಣೆಯಾ ಗಿದೆ. ಇನ್ನು ಮೇ ಮಾಸಾಂತ್ಯಕ್ಕೆ ಮೀನುಗಾರಿಕೆ ಅಂತ್ಯವಾಗುತ್ತದೆ. ಅನಂತರ ಎರಡು ತಿಂಗಳು ನಿಷೇಧವಿರುತ್ತದೆ. ಮೇ 3ರ ಅನಂತರ ಯಾಂತ್ರಿಕ ಮೀನುಗಾರಿಕೆಗೆ ಅವಕಾಶ ಸಿಕ್ಕರೂ, ಕಾರ್ಮಿಕರ ಕೊರತೆ ಇದೆ. ಮಳೆ ಆರಂಭವಾದರೆ ಅರ್ಧದಲ್ಲೇ ಮೊಟಕುಗೊಳಿಸಬೇಕಾಗುತ್ತದೆ. ಆದ್ದರಿಂದ ಮೇನಲ್ಲಿ ಮೀನುಗಾರಿಕೆ ನಡೆಯುವ ಯಾವುದೇ ನಿರೀಕ್ಷೆ ಇಲ್ಲ. ಡೀಸೆಲ್‌ ಸಬ್ಸಿಡಿ ವಿಳಂಬ, ಸಾಲವೂ ದೊಡ್ಡದಾಗಿದೆ. ಕಾರ್ಮಿಕರಿಗೂ ಕೊಡಲು ಹಣವಿಲ್ಲ ಎನ್ನುತ್ತಾರೆ, ಬೋಟ್‌ ಹೊಂದಿರುವ ಮಲ್ಪೆಯ ಸತೀಶ್‌ ಕುಂದರ್‌ ಅವರು.

Advertisement

ಇನ್ನು 5 ತಿಂಗಳು ಸ್ತಬ್ಧ
ಮಂಗಳೂರು ,ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 4,350 ಟ್ರಾಲ್‌ಬೋಟ್‌ಗಳು, 272 ಪರ್ಸಿನ್‌, 9,652 ಮೋಟರೀಕೃತ ನಾಡ ದೋಣಿ ಹಾಗೂ 9,254 ದೋಣಿಗಳ ಮೂಲಕ ಸುಮಾರು 1ಲಕ್ಷ ಮಂದಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮಹಿಳಾ ಮೀನುಗಾರರು ಸಹಿತ ಲಕ್ಷಕ್ಕೂ ಅಧಿಕ ಕಾರ್ಮಿಕರು ಕೂಡ ಮೀನು ಗಾರಿಕೆಯನ್ನೇ ಪರೋಕ್ಷವಾಗಿ ಅವಲಂಬಿಸಿದ್ದಾರೆ. ಮಾ. 20ರಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಒಟ್ಟಾರೆ ಕರಾವಳಿ ಜಿಲ್ಲೆಯಲ್ಲಿ ಇನ್ನೂ ಸುಮಾರು 5 ತಿಂಗಳು ಮೀನುಗಾರಿಕೆ ಸಂಪೂರ್ಣ ಸ್ತಬ್ಧಗೊಳ್ಳಲಿದ್ದು, ಸುಮಾರು 1,000 ಕೋ. ರೂ. ನಷ್ಟ ಉಂಟಾಗಲಿದೆ.

ಕನಿಷ್ಠ 5 ತಿಂಗಳ ಬಡ್ಡಿ ಮನ್ನಾ ಮಾಡಿ
ರೈತರಿಗೆ ಪರಿಹಾರ ನೀಡುವ ಸಂದರ್ಭ ರೈತರ ಜಮೀನಿನ ಪ್ರಮಾಣವನ್ನು ಮಾನದಂಡವಾಗಿ ಪರಿಗಣಿಸುವ ರೀತಿಯಲ್ಲಿಯೇ, ಮೀನುಗಾರರಿಗೂ ಬೋಟ್‌ಗಳನ್ನು ಪರಿಗಣಿಸಿ ಪರಿಹಾರವನ್ನು ನೀಡಬೇಕು.ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಾಲಗಳಿಗೆ ಕನಿಷ್ಠ 5-6 ತಿಂಗಳ ಬಡ್ಡಿಯನ್ನು ಮನ್ನಾ ಮಾಡಬೇಕು.
-ಯಶ್‌ಪಾಲ್‌ ಎ. ಸುವರ್ಣ,
ಅಧ್ಯಕ್ಷರು, ಮೀನು ಮಾರಾಟ ಫೆಡರೇಶನ್‌

ಖೇದಕರ ಸಂಗತಿ
ಯಾಂತ್ರಿಕ ಮೀನುಗಾರರ ನೆರವಿಗೆ ಯಾರೊಬ್ಬರೂ ಬಾರದಿರುವುದು ಖೇದಕರ ಸಂಗತಿ. ರಾಜ್ಯ ಮತ್ತು ಕೇಂದ್ರ ಸರಕಾರ ಕೊರೊನಾ ಹಿನ್ನೆಲೆಯಲ್ಲಿ ಅನುಕೂಲವಾಗುವ ಯೋಜನೆ ಪ್ರಕಟಿಸಬೇಕಾಗಿದೆ.
-ಕೃಷ್ಣ ಎಸ್‌. ಸುವರ್ಣ,
ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next