Advertisement
ಹೊಯ್ಸಳ ದೇವಾಲಯಗಳು, ಅಲ್ಲಿನ ಕಲೆಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾಗ ಆಕರ್ಷಿಸಿದ್ದು ಜೈನ ದೇವಾಲಯಗಳು. ಅದು ಹೇಗಿರಬಹುದು? ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡ ದೇಗುಲಗಳಂತೆಯೇ ಜೈನದೇವಾಲಯಗಳೂ ಇರಬಹುದೇ ಅನ್ನೋ ಕುತೂಹಲ ಇತ್ತು. ಆಗಾಗಿ ನಾನು ಶ್ರವಣಬೆಳಗೊಳಕ್ಕೆ ಹೋಗಿದ್ದೆ. ನೋಡಿದರೆ ಆಶ್ಚರ್ಯ. ಹೊಯ್ಸಳರ ಕಾಲದಲ್ಲಿ ಕಟ್ಟಿದ ಬಸದಿಗಳೆಲ್ಲವೂ ಹೊಯ್ಸಳ ಶೈಲಿಯಲ್ಲಿರಲಿಲ್ಲ. ಬದಲಾಗಿ ದ್ರಾವಿಡ ಸಂಪ್ರದಾಯದಲ್ಲಿ ಇದ್ದವು. ಈ ಭಿನ್ನತೆಯೇ ನನ್ನ ಅಧ್ಯಯನಕ್ಕೆ ಪ್ರೇರಣೆಯಾಗಿದ್ದು.
Related Articles
Advertisement
ವಿಗ್ರಹದ ಎತ್ತರದ ಕುರಿತು ಒಂದು ನಿರ್ಧಾರವಾದ ನಂತರ, ಪಾದದಿಂದ ತೌಕದ ವರೆಗೂ, ಪಾದದಿಂದ ಹೊಕ್ಕಳು ವರೆಗೂ, ಪಾದದಿಂದ ಕತ್ತಿನ ರೇಖೆವರೆಗೂ ಎಷ್ಟು ಅಡಿ ಇದೆ, ಮೊಣಕಾಲಿನಿಂದ ಟೊಂಕದವರೆಗೂ ಎಷ್ಟೆಷ್ಟು ಅಡಿಗಳಿವೆ ಅನ್ನೋದರ ಲೆಕ್ಕ ಮಾಡಿದೆವು. ಬೆರಳುಗಳ ಉದ್ದ, ಕಿವಿ, ಮೂಗಿನ ಅಗಲ, ಉದ್ದಗಳನ್ನು ಬಹಳ ಕೇರ್ ಫುಲ್ಲಾಗಿ ಅಳೆಯಬೇಕಾದಾಗ ವಿಗ್ರಹದ ಸೌಂದರ್ಯಕ್ಕೆ, ಗೌರವಕ್ಕೆ ದಕ್ಕೆಯಾಗದಂತೆ ರಕ್ಷಣಾತ್ಮಕವಾಗಿ ಕೆಲಸ ಮಾಡಬೇಕಾಗುತ್ತದೆ.
ನಮ್ಮಲ್ಲಿರುವ ವಿಗ್ರಹಗಳಲ್ಲಿ ಅತ್ಯಂತ ಸುಂದರ ವಿಗ್ರಹ ಎಂದರೆ ಈ ಶ್ರವಣಬೆಳಗೊಳದ ಗೊಮ್ಮಟ ಮೂರ್ತಿ. ಮುಖಭಾವ, ಅದರಲ್ಲಿ ತುಳುಕುವ ದೈವೀ ಪ್ರಭಾವ ಇದನ್ನೆಲ್ಲಾ ಮೀರಿಸುವ ವಿಷಯ ಬಂದಾಗ ಶ್ರವಣಬೆಳಗೊಳದ ಗೊಮ್ಮಟನಿಗೆ ಸರಿಸಾಟಿಯಾಗಿ ನಿಲ್ಲುವ ಮೂರ್ತಿ ಯಾವುವೂ ಇಲ್ಲ ಅನಿಸುತ್ತದೆ. ಒಟ್ಟಾರೆ ಬಹಳ ಆಳವಾಗಿ ಅಭ್ಯಸಿಸಿದರೆ, ಈ ಮೂರ್ತಿಯನ್ನು ಮೇಲಿಂದ ನೋಡಿದರೆ ಭುಜದಿಂದ ಸೊಂಟದವರೆಗಿನ ಭಾಗ ಹೆವಿ ಅನಿಸುತ್ತದೆ. ಅಲ್ಲೇನಾದರೂ ಸ್ವಲ್ಪ ಪ್ರಪೋಷನ್ ಇಂಪ್ರೂ ಆಗಬಹುದಾಗಿತ್ತೇನೋ ಅನ್ನೋ ರೀತಿ ಭಾಸವಾಗುತ್ತದೆ. ಆದರೆ ಆಕಾಲದಲ್ಲಿ ದೊಡ್ಡಬಂಡೆಯನ್ನು ಕೊರೆಯಬೇಕಾದಾಗ, ಅವರಿಗಿದ್ದ ಅಡಚಣೆ ಏನಿದ್ದವೋ, ಏನೋ, ಅಲ್ಲವೇ? ಆದರೆ ದೇಹ ಭಾಗದೊಳಗೆ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಎಲ್ಲೋ ಒಂದು ಕಡೆಗೆ ವಾಲ್ಯುಮ್ ಹೆಚ್ಚಾಯೆ¤àನೋ ಅಂತ ಅನಿಸಿದರೂ ಗೊಮ್ಮಟನ ಮುಖಚರ್ಯೆ ಇದೆಯಲ್ಲ ಅದು ಅತ್ಯದ್ಬುತ. ಗೊಮ್ಮಟನ ಸೌಂದರ್ಯವನ್ನು ಬೊಪ್ಪಣ ಕವಿ 12ನೇ ಶತಮಾನದಲ್ಲೇ ವರ್ಣನೆ ಮಾಡಿದ್ದಾರೆ. ಇವರಿಗಿಂತ ಚೆನ್ನಾಗಿ ವರ್ಣನೆ ಮಾಡುವುದಾಗಲೀ, ಅಂಥ ಗೊಮ್ಮಟನನ್ನು ಮೀರಿಸುವಂತೆ ಕೆತ್ತುವುದಕ್ಕಾಗಲಿ ಈವರೆಗೂ ಸಾಧ್ಯವಾಗಲೇ ಇಲ್ಲ.
ಒಂದು ವಿಚಾರ ಏನೆಂದರೆ, ಇದೇ ಗೊಮ್ಮಟನ ಅಲ್ಪಪ್ರಮಾಣದ ಮೂರ್ತಿಗಳಲ್ಲಿ ಕೆಲವು ಬಹಳ ಸೌಂದರ್ಯಯುತವಾಗಿವೆ. ಆದರೆ ಮಹಾ ಪ್ರಮಾಣದ ಮೂರ್ತಿಗಳಲ್ಲಿ ಈ ರೀತಿಯ ಸೌಂದರ್ಯ ಖನಿ ಇಲ್ಲವೇ ಇಲ್ಲ ಎನ್ನಬೇಕು. ಕೆಲವು ಮೂರ್ತಿಗಳಲ್ಲಿ ಎತ್ತರವೂ, ಸೌಂದರ್ಯವೂ ಎಲ್ಲವೂ ಇದ್ದರೂ ದೈವೀ ಭಾವ ಇರುವುದಿಲ್ಲ. ಹೀಗಾಗಿ ಈ ಮೂರ್ತಿ ಕೆತ್ತನೆಗಳಲ್ಲಿ ಗಾತ್ರಗಳಿಗಿಂತ ಹೆಚ್ಚಾಗಿ ಅದರಲ್ಲಿನ ಭಾವಗಳ ಪ್ರಮಾಣಗಳನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಈ ಎಲ್ಲದರ ಸಮ್ಮಿಲನವನ್ನು ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಯಲ್ಲಿ ಮಾತ್ರ ಕಾಣಬಹುದು.
ಪ್ರೊ.ಷ. ಶೆಟ್ಟರ್