ರೈತರು ಸ್ವಯಂ ಕೆಎಂಎಫ್ ಮಳಿಗೆ ಪಕ್ಕ ಹಣ್ಣು, ತರಕಾರಿ, ಹೂವು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಈ ಕುರಿತು ಹೇಳಿಕೆ ನೀಡಿರುವ ತೋಟಗಾರಿಕೆ ಸಚಿವ ನಾರಾಯಣಗೌಡ, ಹಣ್ಣು, ತರಕಾರಿ ಮಾರಾಟ ಮಾಡಲಾಗದೆ ತೊಂದರೆಗೀಡಾಗಿದ್ದ ರೈತರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
Advertisement
ರಾಜ್ಯಾದ್ಯಂತ ಕೆಎಂಎಫ್ ಹಾಗೂ 14 ಜಿಲ್ಲಾ ಹಾಲು ಒಕ್ಕೂಟ ಸೇರಿ 1500ಕ್ಕಿಂತ ಹೆಚ್ಚು ಮಳಿಗೆಗಳಿವೆ. ರೈತರು ಈ ಸ್ಥಳಗಳಲ್ಲಿ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಬಹುದು. ಹೀಗೆ ಮಾರಾಟಕ್ಕೆ ಬಂದ ರೈತರಿಗೆ ಕೆಎಂಎಫ್ ವತಿಯಿಂದ ಪ್ರತಿನಿತ್ಯ ಉಚಿತ ನೀರು, ಮಜ್ಜಿಗೆ, ಸ್ಯಾನಿಟೈಸರ್, ಕೈಗವಚ(ಗ್ಲೌಸ್), ಮಾಸ್ಕ್ ಗಳನ್ನ ನೀಡಲಾಗುವುದು. ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಮಾರಾಟ ಮಾಡಬಹುದು.