ಹೊಳಲ್ಕೆರೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 50 ಬೆಡ್, ಬಿ.ದುರ್ಗದಲ್ಲಿ 30 ಬೆಡ್‌ಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ, ಮೊರಾರ್ಜಿವಸತಿ ಶಾಲೆಗಳಲ್ಲಿ 120 ಬೆಡ್‌ಗಳ ಕ್ವಾರಂಟೈನ್ ಕೇಂದ್ರ ಸ್ಥಾಪಿಸಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿ ಅವರು ಮಾತನಾಡಿದರು. ನಮ್ಮ ಪ್ರಾಣ, ನಮ್ಮರಕ್ಷಣೆ, ಜೀವ ಇದ್ದರೆ ಜೀವನ ಎನ್ನುವುದನ್ನು ಜನರು ಅರಿತುಕೊಂಡು ಕೋವಿಡ್ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು.ಕೋವಿಡ್ ನಿಯಂತ್ರಣಕ್ಕೆ ಸರ್ಕಾರದಿಂದಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದು, ಸೋಂಕುಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ತಾಲೂಕಿನಲ್ಲಿ ಕೋವಿಡ್‌ನ ಗಂಭೀರತೆ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮತೆಗೆದುಕೊಂಡು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 114 ಸಕ್ರಿಯಪ್ರಕರಣಗಳಲ್ಲಿ 97 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 8 ಸೊಂಕಿತರಿಗೆ ಬಿ.ದುರ್ಗ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ 50 ಹಾಸಿಗೆ ಕೋವಿಡ್ ಹೆಲ್ತ್ ಸೆಂಟರ್ ವ್ಯವಸ್ಥೆ ಮಾಡಿ, 30 ಆಕ್ಸಿಜನ್ ಸಿಲಿಂಡರ್ ನೀಡಲಾಗಿದೆ. ಜತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿಹಾಗೂ ಬೊಮ್ಮನಕಟ್ಟೆ ವಸತಿ ಶಾಲೆಯಲ್ಲಿತಲಾ 60 ಜನರಿರುವಂತೆ 120 ಬೆಡ್‌ಗಳ 3ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗಿದೆ. ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಪಿಜಿಶಿಯನ್ ನೇಮ ಮಾಡುವುದಾಗಿ ತಿಳಿಸಿದರು.
ಪಟ್ಟಣ ಹಾಗೂ ತಾಲೂಕಿನ ಜನರಿಗೆ ಕೋವಿಡ್ ಡೋಸ್ ನೀಡಲು ಕೋವ್ಯಾಕ್ಸಿನ್‌ಹಾಗೂ ಕೊವಿಶೀಲ್ಡ್ 4 ಸಾವಿರ ಡೋಸ್ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಸ್ತಾನುಮಾಡಲಾಗಿದೆ. 18 ವರ್ಷದ ಮೇಲ್ಪಟ್ಟವರಿಗೆಶೀಘ್ರದಲ್ಲಿ ಲಸಿಕೆ ನೀಡಲಾಗುತ್ತದೆ ಎಂದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇದ್ದು,ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿ ನೇಮಕ ಮಾಡಬೇಕು ಎಂದು ವೈದ್ಯಾಧಿ ಕಾರಿ ಡಾ| ಕೃಷ್ಣಮೂರ್ತಿ ಮನವಿ ಮಾಡಿದರು. ಆರೋಗ್ಯಸಚಿವರೊಂದಿಗೆ ಮಾತನಾಡಿ ಇಲ್ಲಿಗೆ ಬೇಕಾದ ವೈದ್ಯಕೀಯ ಉಪಕರಣ, ವೈದ್ಯರು, ಸಿಬ್ಬಂದಿಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.
ಎಲ್ಲಾ ಕಡೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ರಸ್ತೆ ಸಂಚಾರ, ಜನಜಂಗುಳಿನಿಯಂತ್ರಿಸಿ. ಜನರಿಗೆ ಕೋವಿಡ್ ಅರಿವು ಮೂಡಿಸಿ ರಸ್ತೆಗೆ ಬಾರದಂತೆ ತಿಳಿಸಿ. ರಸ್ತೆಮೇಲೆ ನಿಂತು ಕಾಲಹರಣ ಮಾಡುವುದನ್ನು ನಿಲ್ಲಿಸಿ ಎಂದು ಪಿಎಸ್‌ಐ ವಿಶ್ವನಾಥ್ ಅವರನ್ನುತರಾಟೆಗೆ ತೆಗೆದುಕೊಂಡರು. ಪುರಸಭೆಉಪಾಧ್ಯಕ್ಷ ಕೆ.ಸಿ. ರಮೇಶ್, ತಹಶೀಲ್ದಾರ್ ರಮೇಶ ಆಚಾರಿ, ತಾಲೂಕು ಆರೋಗ್ಯಾಧಿಕಾರಿ ಡಾ| ಜಯಸಿಂಹ, ತಾಪಂ ಇಒ ಗಂಗಣ್ಣ, ಪುರಸಭೆ ಮುಖ್ಯಾಧಿಕಾರಿ ವಾಸಿಂ ಇದ್ದರು