Advertisement

ವಿಶ್ವವನ್ನು ಬೆಚ್ಚಿ ಬೀಳಿಸುತ್ತಿರುವ ದಡಾರ ಕಾಯಿಲೆ : ವಿಶ್ವ ಆರೋಗ್ಯ ಸಂಸ್ಥೆ

09:44 AM Dec 10, 2019 | Hari Prasad |

ವಾಷಿಂಗ್ಟನ್‌: ಒಂದೆಡೆ ಬದಲಾಗುತ್ತಿರುವ ಅವಮಾನ ಮಕ್ಕಳ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದರೆ, ಇನ್ನೊಂದೆಡೆ ದಿನದಿನೆ ದಡಾರ ಕಾಯಿಲೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಅಲ್ಲದೇ ಈ ಸೋಂಕು ಮಾರಣಾಂತಿಕ ಕಾಯಿಲೆ ಆಗಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಕಾಯಿಲೆ ಬಂದು 2018ರಲ್ಲಿ ಜಾಗತಿಕವಾಗಿ 1.40 ಲಕ್ಷ ಮಕ್ಕಳು ದಡಾರ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಗತ್ತಿನಲ್ಲಿ ಒಂದರಿಂದ ಹದಿನೈದು ವರ್ಷದ ಒಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಈ ಕಾಯಿಲೆ ಕಂಡುಬರುತ್ತಿದ್ದು, ಈ ಕಾಯಿಲೆಗೆ ಲಕ್ಷಾಂತರ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಅಮೆರಿಕದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ ಈ ಸೋಂಕು ಕಾಯಿಲೆಯನ್ನು ವ್ಯಾಕ್ಸಿನೇಷನ್‌ ಮೂಲಕ ನಿಯಂತ್ರಿಸಲು ಕಳೆದ ಹಲವು ದಶಕದಿಂದ ಎಲ್ಲ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದು, ಅದರಲ್ಲಿ ಕೆಲವು ರಾಷ್ಟ್ರಗಳು ಮಾತ್ರ ಯಶಸ್ವಿಯಾಗಿವೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಬಡರಾಷ್ಟ್ರಗಳಲ್ಲೇ ಅಧಿಕ
ಹೆಚ್ಚಾಗಿ ಬಡರಾಷ್ಟ್ರಗಳಲ್ಲೇ ದಡಾರ ಸಂಬಂಧಿತ ಸಾವಿನ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ  ದಾಖಲಾಗುತ್ತಿದ್ದು, ಮುಖ್ಯವಾಗಿ ಆಫ್ರಿಕಾದ ರಾಷ್ಟ್ರಗಳಲ್ಲಿ  ಹೆಚ್ಚು  ಎಂದು ಡಬ್ಲ್ಯುಎಚ್‌ಒ ಸಂಸ್ಥೆ ತಿಳಿಸಿದೆ.

ಕೆಮ್ಮು, ಸೀನುವುದರ ಮೂಲಕ ಹರಡುತ್ತದೆ
ಈ ಕಾಯಿಲೆ ತೀವ್ರ ಸೋಂಕಿನ ಮಾರಣಾಂತಿಕ ರೋಗವಾಗಿದ್ದು, ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.ಜತೆಗೆ ಈ ಕಾಯಿಲೆ ಕೆಮ್ಮು, ಸೀನುವುದರ ಮೂಲಕ ಇತರರಿಗೆ ಹರಡಲಿದ್ದು, ಈ ಕಾಯಿಲೆಯಿಂದ ನ್ಯುಮೋನಿಯ, ಅತಿಸಾರ ಬೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳು ಬರುತ್ತದೆ.

Advertisement

ಲಸಿಕೆ ಹಾಕಿಸುವ ಮೂಲಕ ತಡೆಗಟ್ಟಬಹುದು
ಲಸಿಕೆ ಹಾಕಿಸುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಇನ್ನೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ರಾಷ್ಟ್ರಗಳೆಂದರೇ ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್ ಕಾಂಗೋ (ಡಿಆರ್‌ಸಿ), ಲೈಬೀರಿಯಾ, ಮಡಗಾಸ್ಕರ್‌, ಸೊಮಾಲಿಯಾ ಮತ್ತು ಉಕ್ರೇನ್‌ ಆಗಿವೆ. ವಿಶ್ವದಾದ್ಯಂತ ಕಂಡುಬರುವ ಪ್ರಕರಣಗಳ ಪೈಕಿ ಅರ್ಧದಷ್ಟು ಈ ದೇಶಗಳಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next