Advertisement
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇ 20ರಂದು 8 ವಾರಗಳಲ್ಲಿ ಅಂದರೆ ಜುಲೈ 20ರೊಳಗೆ ವಾರ್ಡ್ ಮರುವಿಂಗಡಣಾ ವರದಿ ಹಾಗೂ ವಾರ್ಡ್ ಮೀಸಲಾತಿ ಪಟ್ಟಿ ಸಿದ್ಧಪಡಿಸಿರಬೇಕು ಎಂದು ಆದೇಶಿಸಿತ್ತು. ಅದರಂತೆ ಜುಲೈ 20ರೊಳಗೆ ಚುನಾವಣೆ ಮಾಡಲು ಸರ್ಕಾರದಿಂದ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರದ ಬಳಿ ಇನ್ನು 34 ದಿನಗಳು ಮಾತ್ರ ಉಳಿದಿದೆ.
Related Articles
ಸುಪ್ರೀಂಕೋರ್ಟ್ ನೀಡಿದ ಗಡುವಿನಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿಲ್ಲ.
Advertisement
ಸಿಎಂ ಅಂತಿಮಗೊಳಿಸಿಲ್ಲ: ವಾರ್ಡ್ ಮರುವಿಂಗಡಣೆ ಕುರಿತ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. ವರದಿ ಸಲ್ಲಿಕೆಯಾದ ದಿನವೇ ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿಗಳು ವರದಿಯನ್ನು ಪರಿಶೀಲಿಸಿದ ನಂತರ ಅದನ್ನು ನಗರಾಭಿವೃದ್ಧಿಗೆ ಕಳುಹಿಸುತ್ತಾರೆ. ಅದಾದ ನಂತರವಷ್ಟೇ ಸಾರ್ವಜನಿಕ ಆಕ್ಷೇಪಣೆಗೆ ಪ್ರಕಟಿಸಲಾಗುತ್ತದೆ. ಹೀಗಾಗಿ ಅಧಿಕಾರಿಗಳು ಕೂಡ ಮುಂದಿನ ಪ್ರಕ್ರಿಯೆ ನಡೆಸಲಾಗದೆ ಅಸಹಾಯಕರಾಗಿದ್ದಾರೆ.
ಬೇಕೆಂದೇ ವಿಳಂಬ?2020ರ ಸೆಪ್ಟೆಂಬರ್‌ನಲ್ಲೇ ಬಿಬಿಎಂಪಿ ಕಾರ್ಪೋರೆಟರ್‌ಗಳ ಅವಧಿ ಮುಗಿದಿದೆ. ಅದಾದ ನಂತರ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಹಾಗೂ ಬಿಬಿಎಂಪಿಗೆ ಹೊಸ ಕಾಯ್ದೆ ರಚಿಸಲು ಸರ್ಕಾರ ಮುಂದಾಗಿತ್ತು. ಅದರ ನಡುವೆ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೆಲ ಮಾಜಿ ಕಾರ್ಪೋರೆಟರ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕೂಡ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರ ಚುನಾವಣೆ ನಡೆಯದಂತೆ ಮಾಡಲು ಸಾಕಷ್ಟು ಕಸರತ್ತು ಮಾಡಿತ್ತು. ಇದೀಗ ಸರ್ಕಾರ ವಾರ್ಡ್ ಮರುವಿಂಗಡಣಾ ವರದಿ ಅಂತಿಮಗೊಳಿಸುವಲ್ಲಿ ವೃಥಾ ಕಾಲಹರಣ ಮಾಡುತ್ತಿದೆ. ಇದನ್ನು ಗಮನಿಸಿದರೆ ಸುಪ್ರೀಂಕೋರ್ಟ್‌ಗೆ ಚುನಾವಣೆ ನಡೆಸಲು ಬೇಕಾದ ಪ್ರಕ್ರಿಯೆಗಳನ್ನೆಲ್ಲ ನಡೆಸುತ್ತಿದ್ದೇವೆ. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂಬುದನ್ನು ತೋರಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಅಲ್ಲದೆ, ವಾರ್ಡ್ ಮರುವಿಂಗಡಣಾ ಕರಡು ವರದಿಯನ್ನು ಸಾರ್ವಜನಿಕ
ಆಕ್ಷೇಪಣೆಗೆ ಕರೆಯದೆ ಬೇಕೆಂದೇ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸುಪ್ರೀಂಕೋರ್ಟ್ ನೀಡಿದ ಸಮಯದೊಳಗೆ ವಾರ್ಡ್ ಮರುವಿಂಗಡಣಾ ವರದಿ ಸೇರಿ ಇನ್ನಿತರ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಬೇಕು. ಅದರೆ ಆಡಳಿತದ ದುರುಪಯೋಗ ಪಡಿಸಿಕೊಂಡು, ಚುನಾವಣೆ ಮುಂದೂಡಲು ವಾರ್ಡ್ ಮರುವಿಂಗಡಣಾ ಕರಡು ವರದಿ ಪ್ರಕಟಿಸಲು ವಿಳಂಬ ಮಾಡುತ್ತಿದೆ.
●ಎಂ.ಶಿವರಾಜು, ಬಿಬಿಎಂಪಿ ಮಾಜಿ ಸದಸ್ಯ ●ಗಿರೀಶ್ ಗರಗ